ಲಘು ಯುದ್ಧವಿಮಾನ ತೇಜಸ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುವುದು: ಕೇಂದ್ರ ಸರ್ಕಾರ
ದೇಶಿ ನಿರ್ಮಿತ ತೇಜಸ್- ಲಘು ಯುದ್ಧವಿಮಾನದ ಉತ್ಪಾದನೆಯನ್ನು ದ್ವಿಗುಣಗೊಳಿಸುವಲಾಗುವುದು ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ಇಂದರ್ ಜಿತ್ ಸಿಂಗ್ ಹೇಳಿದ್ದಾರೆ
ನವದೆಹಲಿ: ದೇಶಿ ನಿರ್ಮಿತ ತೇಜಸ್- ಲಘು ಯುದ್ಧವಿಮಾನದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಪ್ರಸ್ತಾವನೆ ಪರಿಶೀಲನೆ ಪ್ರಕ್ರಿಯೆಯಲ್ಲಿದ್ದು, ಇದಕ್ಕಾಗಿ 1 ,259 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರಕ್ಷಣಾ ಇಲಾಖೆ ರಾಜ್ಯ ಸಚಿವ ಇಂದರ್ ಜಿತ್ ಸಿಂಗ್, ಹೆಚ್ ಎ ಎಲ್ ಲಘು ಯುದ್ಧ ವಿಮಾನಗಳ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಸಂಪುಟ ಸಮಿತಿ ಪ್ರಸ್ತಾವನೆ ಪರಿಶೀಲನೆ ಪ್ರಸ್ತಾವನೆಯಲ್ಲಿದೆ. ಉತ್ಪಾದನೆಗೆ ತಗುಲುವ ಶೇ. 50 ರಷ್ಟು ವೆಚ್ಚವನ್ನು ಹೆಚ್ ಎ ಎಲ್ ಸಂಸ್ಥೆ, ಶೇ.25 ರಷ್ಟು ವೆಚ್ಚವನ್ನು ಐಎಎಫ್ ಹಾಗೂ ಶೇ.20 ರಷ್ಟು ಭಾರತೀಯ ನೌಕಾ ಪಡೆ ಭರಿಸಲಿದೆ ಎಂದು ಹೇಳಿದ್ದಾರೆ.
ಉತ್ಪಾದನೆಗೆ 36 ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದ್ದು 80 ಲಘು ವಿಮಾನಗಳಲ್ಲಿ ನಾಲ್ಕು ಅವಶ್ಯಕ ಸಾಮರ್ಥ್ಯಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಸಂಸತ್ ಗೆ ಇಂದರ್ ಜಿತ್ ಸಿಂಗ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.