ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ಡಿದೇವಿ 
ದೇಶ

ಆರ್ ಎಸ್ ಎಸ್ ಚಡ್ಡಿ ಬದಲಾಗಲು ನನ್ನ ಹೆಂಡತಿ ಕಾರಣ: ಲಾಲೂ

ಆರ್ ಎಸ್ ಎಸ್ ಸದಸ್ಯರು ಚಡ್ಡಿ ಧರಿಸುವುದನ್ನು ಬದಲಿಸಿ ಪ್ಯಾಂಟ್‌ ಹಾಕಿಕೊಳ್ಳುವ ನಿಯಮ ಜಾರಿಗೆ ತರಲು ನನ್ನ ಪತ್ನಿ ರಾಬ್ಡಿದೇವಿ ಕಾರಣ ...

ಪಾಟ್ನಾ: ಆರ್ ಎಸ್ ಎಸ್  ಸದಸ್ಯರು ಚಡ್ಡಿ ಧರಿಸುವುದನ್ನು ಬದಲಿಸಿ ಪ್ಯಾಂಟ್‌ ಹಾಕಿಕೊಳ್ಳುವ ನಿಯಮ ಜಾರಿಗೆ ತರಲು ನನ್ನ ಪತ್ನಿ ರಾಬ್ಡಿದೇವಿ ಕಾರಣ ಎಂದು ಆರ್‌ಜೆಡಿ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ಆರ್ ಎಸ್ ಎಸ್ ಸಂಘಟನೆಯ ಸದಸ್ಯರ ಡ್ರೆಸ್ ಬದಲಿಸುವಂತೆ ರಾಬ್ಡಿದೇವಿ ಒತ್ತಡ ಹೇರಿದ್ದರು. ಮತ್ತೇನಾದರೂ ನಮಗೆ ಅಗತ್ಯ ಬಿದ್ದಲ್ಲಿ ಅವರು ಚಡ್ಡಿ ಧರಿಸುವಂತೆ ಮಾಡುತ್ತೇವೆ ಎಂದು ಲೇವಡಿ ಮಾಡಿದ್ದಾರೆ.
 
ಕಳೆದ ಎರಡು ತಿಂಗಳುಗಳ ಹಿಂದೆ ಪತ್ನಿ ರಾಬ್ಡಿದೇವಿ, ಆರೆಸ್ಸೆಸ್ ಡ್ರೆಸ್‍‌ಕೋಡ್ ಬಗ್ಗೆ ಹೇಳಿಕೆ ನೀಡಿದ್ದರಿಂದ ಮುಜುಗರಕ್ಕೊಳಗಾಗಿ, ಕೊನೆಗೂ ಮೊದಲಿನ ಡ್ರೆಸ್‌ಗೆ ಗುಡ್‍‌ಬೈ ಹೇಳಿ ಪ್ಯಾಂಟ್ ಧರಿಸುವಂತಾಯಿತು ಎಂದರು.
 
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಸದಸ್ಯರು ಚಡ್ಡಿ ಹಾಕಿಕೊಂಡು ತಿರುಗಲು ನಾಚಿಕೆಯಾಗುವುದಿಲ್ಲವೇ ಎಂದು ರಾಬ್ಡಿದೇವಿ ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!