ಕೊಲೆ ಆರೋಪ ಎದುರಿಸುತ್ತಿರುವ ರಜನಿ ಮತ್ತು ಆಕೆಯ ಕುಟುಂಬ 
ದೇಶ

ಬಾಲ್ಯದ ಕಹಿ ಘಟನೆಯಿಂದ ಭೀತಿಗೊಂಡು ಮಕ್ಕಳ ಕೊಂದ ರಜನಿ..?

ಬಾಲ್ಯದಲ್ಲಿ ತನಗಾದ ಅಹಿತಕರ ಘಟನೆಗಳಿಂದ ಬೇಸತ್ತ ತಾಯಿ ರಜನಿ ತನ್ನ ಮಕ್ಕಳಿಗೂ ಇದೇ ಪರಿಸ್ಥಿತಿ ಆಗುವ ಶಂಕೆಯಿಂದ ಮಕ್ಕಳನ್ನು ಹತ್ಯೆ ಮಾಡಿದರೇ ಎಂಬ ಅನುಮಾನಗಳು ಕಾಡತೊಡಗಿವೆ.

ಹೈದರಾಬಾದ್: ಇತ್ತೀಚೆಗೆ ಹೈಜರಾಬಾದಿನಲ್ಲಿ ತಾಯಿ ತನ್ನ ಸ್ವಂತ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಬಾಲ್ಯದಲ್ಲಿ ತನಗಾದ ಅಹಿತಕರ ಘಟನೆಗಳಿಂದ ಬೇಸತ್ತ ತಾಯಿ ರಜನಿ ತನ್ನ ಮಕ್ಕಳಿಗೂ ಇದೇ ಪರಿಸ್ಥಿತಿ ಆಗುವ ಶಂಕೆಯಿಂದ ಮಕ್ಕಳನ್ನು ಹತ್ಯೆ ಮಾಡಿದರೇ ಎಂಬ ಅನುಮಾನಗಳು ಕಾಡತೊಡಗಿವೆ.

ಮಕ್ಕಳನ್ನು ಕೊಂದ ಆರೋಪ ಎದುರಿಸುತ್ತಿವ ತಾಯಿ ರಜನಿ ತಮ್ಮ ಬಾಲ್ಯದಲ್ಲಿ ಲೈಂಗಿಕಿ ಕಿರುಕುಳಕ್ಕೆ ತುತ್ತಾದ ಪರಿಣಾಮ ಅಂತಹುದೇ ಕಿರುಕುಳ ತಮ್ಮ ಮಕ್ಕಳ ಮೇಲೂ ಆಗಬಹುದು ಎಂಬ  ಶಂಕೆಯ ಮೇರೆಗೆ ಮಕ್ಕಳನ್ನು ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸಾವನ್ನಪ್ಪಿದ ಮಕ್ಕಳ ಮೃತದೇಹಗಳನ್ನು ವೈದ್ಯಕೀಯ  ಪರೀಕ್ಷೆಗೊಳಪಡಿಸಲಾಗಿದ್ದು, ಅಲ್ಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳದ ಸಾಕ್ಷಿಗಳ ಪತ್ತೆಯಾಗದ ಹಿನ್ನಲೆಯಲ್ಲಿ ಪೊಲೀಸರು ಇಂತಹುದದೊಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣವನ್ನು ತನಿಖೆ ನಡೆಸುತ್ತಿರುವ ಹೈದರಾಬಾದ್ ಪೊಲೀಸರು ಈಗಾಗಲೇ ತಾಯಿ ರಜನಿ ಅವರನ್ನು ಕೂಡ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ವರದಿಯಲ್ಲಿ ಆಕೆಯ ಮಾನಸಿಕ ಪರಿಸ್ಥಿತಿ  ಸಾಮಾನ್ಯವಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಕೊಲೆಯ ಹಿಂದಿನ ಕಾರಣಗಳನ್ನು ಹುಡುಕುತ್ತಿರುವ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.

ಇನ್ನು ತಾಯಿ ರಜನಿಯನ್ನು ವಿಚಾರಣೆ ನಡೆಸಿರುವ ಪೊಲೀಸರು, ಗಂಡನಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ ಉಂಟಾಗುತ್ತಿದ್ದರೆ, ಅವರಿಂದ ಬೇರ್ಪಟ್ಟು ವಿಚ್ಛೇಧನ ಪಡೆಯಬಹುದಿತ್ತಲ್ಲವೇ ಎಂದು  ಪ್ರಶ್ನಿಸಿದಾಗ ರಜನಿ, ನನ್ನ ಮಕ್ಕಳು ಇನ್ನೂ ಚಿಕ್ಕಮಕ್ಕಳಾಗಿದ್ದು ಪೊಲೀಸರಿಗೆ ದೂರು ನೀಡಿದರೆ ಅವರು ದೊಡ್ಡವರಾದ ಬಳಿಕ ಈ ವಿಚಾರ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಅಲ್ಲದೆ ನಾನು ಸದಾ ಕಾಲ ಅವರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾನು ದೂರು ದಾಖಲಿಸಲಿಲ್ಲ ಎಂದು ಉತ್ತರಿಸಿದ್ದಾರೆ.

ತಾಯಿ ರಜನಿ ಮತ್ತು ತಂದೆ ವಿನಯ್ ಚುಟ್ಕೆ 9 ವರ್ಷದ ಹಿಂದೆ ಮದುವೆಯಾಗಿದ್ದು, ಮಕ್ಕಳಾದ ದಿನದಿಂದಲೂ ಅವರ ತಂದೆಯೇ ಮಕ್ಕಳಿಗೆ ಸ್ನಾನ ಮಾಡಿಸಿ ಅವರನ್ನು ಶಾಲೆಗೆ  ಸಿದ್ಧಪಡಿಸುತ್ತಿದ್ದರಂತೆ. ಈಗ್ಗೆ ಒಂದು ದಿನ ಮೊದಲ ಮಗಳು ಮಲಗಿದ್ದಾಗ ತನ್ನ ಖಾಸಗಿ ಅಂಗವನ್ನು ಯಾರೋ ಮುಟ್ಟಿದ ಅನುಭವವಾಯಿತು ಎಂದು ಮಗಳು ತಾಯಿ ರಜನಿಯೊಂದಿಗೆ  ಹೇಳಿಕೊಂಡಿದ್ದಳಂತೆ. ಅಂದಿನಿಂದ ಹಿರಿಯ ಮಗಳಾದ ಅಶ್ವಿಕಾ ತನ್ನ ತಂದೆ ಹತ್ತಿರ ಬಂದಾಗಲೆಲ್ಲಾ ಹೆದರುತ್ತಿದ್ದಳಂತೆ.  ಒಮ್ಮೆ ಪೋಷಕರೊಂದಿಗೆ ರಜನಿ ದೇವಾಲಯಕ್ಕೆ ತೆರಳಿ ಮನೆಗೆ  ಬಂದಾಗ ವಿನಯ್ ಚುಟ್ಕೆ ತಮ್ಮ ಎರಡನೇ ಮಗಳನ್ನು ಭುಜದ ಮೇಲೆ ಕೂರಿಸಿಕೊಂಡಿದ್ದರಂತೆ. ಅಂದಿನಿಂದ ರಜನಿ ವಿನಯ್ ಮೇಲೆ ಅನುಮಾನ ಪಡುತ್ತಿದ್ದರು ಎಂದು ಪೊಲೀಸ್ ಮೂಲಗಳು  ತಿಳಿಸಿವೆ.

ಒಟ್ಟಾರೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಮಕ್ಕಳ ಕೊಲೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT