ಗುಜರಾತ್ ಹೈಕೋರ್ಟ್ 
ದೇಶ

ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಸಾಕಬೇಕು: ಗುಜರಾತ್ ಹೈಕೋರ್ಟ್

ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು, ಅನಂತರ ಅವರನ್ನು ಸಾಕುವ ಅವಶ್ಯಕತೆ ಇಲ್ಲ ಎಂದು ಗುಜರಾತ್ ಹೈಕೋರ್ಟ್...

ಅಹಮದಾಬಾದ್: ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು, ಅನಂತರ ಅವರನ್ನು ಸಾಕುವ ಅವಶ್ಯಕತೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ವೈದ್ಯ ದಂಪತಿಯ ವಿಚ್ಥೇದನ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ನೀಡಿರುವ ನ್ಯಾಯಪೀಠ, ವಿವಾಹವಾಗುವವರೆಗೆ ಮಗಳ ಪೂರ್ಣ ಜವಾಬ್ದಾರಿಯನ್ನು ಪೋಷಕರೇ ಹೊರಬೇಕು. ಆದರೆ ಈ ನಿಯಮ ಮಗನಿಗೆ ಅನ್ವಯವಾಗುವುದಿಲ್ಲ. ಮಗನಿಗೆ 18 ವರ್ಷ ತುಂಬಿದ ನಂತರ ಆತನ ಯಾವುದೇ ಹಣಕಾಸಿನ ಜವಾಬ್ದಾರಿ ತೆಗೆದುಕೊಳ್ಳಬಾರದು ಎಂದು ಹೇಳಿದೆ. ಒಂದು ವೇಳೆ ಗಂಡು ಮಗ ಮಾನಸಿಕ ಹಾಗೂ ದೈಹಿಕ ಅಸ್ವಸ್ಥನಾಗಿದ್ದರೆ ಮಾತ್ರ ಪೋಷಕರು ಜವಾಬ್ದಾರಿ ಹೊರಬಹುದು ಎಂದು ಹೇಳಿದೆ.

ದಿನೇಶ್  ಓಜಾ ಎಂಬುವರ ವಿರುದ್ಧ ಪತ್ನಿ 2006 ರಲ್ಲಿ ಎಫ್ ಐಆರ್ ದಾಖಲಿಸಿದ್ದರು. ಮತ್ತೊಂದೆಡೆ ವೈದ್ಯರಾದ ದಿನೇಶ್ ಓಜಾ ತಮ್ಮ ಪತ್ನಿಯಿಂದ ವಿಚ್ಛೇದನ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಜೀವನ ನಿರ್ವಹಣೆಗೆಂದು ತಮಗೆ ಹಾಗೂ ಮಗನಿಗೆ ಪರಿಹಾರ ಕೊಡಿಸಬೇಕೆಂದು ಪತ್ನಿ ನೀತಾ ಕೋರ್ಟಿಗೆ ಮನವಿ ಮಾಡಿದ್ದರು. ಮಗನಿಗೆ 18 ವರ್ಷಆಗುವವರೆಗೆ ನಿರ್ವಹಣಾ ವೆಚ್ಚ ಭರಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ಅದರಂತೆ ವೈದ್ಯರು ಮಗನಿಗೆ 18 ವರ್ಷ ವಯಸ್ಸು ಆದ ನಂತರ ಮಗನಿಗೆ ಹಣ ನೀಡುವುದನ್ನು ನಿಲ್ಲಿಸಿದರು. ಇದನ್ನು ಪ್ರಶ್ನಿಸಿ ನೀತಾ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಮಗನಿಗೆ 18 ವರ್ಷವಾಗುವವರೆಗೆ ಮಾತ್ರ ಪೋಷಕರು ಸಾಕಬೇಕು. ಆ ನಂತರ ಅವರೇ ಅವರ ಜೀವನ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!