ನರೇಂದ್ರ ಮೋದಿ 
ದೇಶ

ಅಭಿವೃದ್ಧಿಯೊಂದೇ ಮಂತ್ರವಾಗಿರಲಿ, ಬಿಜೆಪಿ ಕಾರ್ಯಕರ್ತರಿಗೆ ಮೋದಿ ಕಿವಿಮಾತು

ದೇಶದ ಎಲ್ಲ ಸಮಸ್ಯೆಗಳಿಗೆ ಅಭಿವೃದ್ಧಿಯೊಂದೇ ಮಂತ್ರ. ಅದಕ್ಕಷ್ಟೇ ನಾವು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...

ನವದೆಹಲಿ: ದೇಶದ ಎಲ್ಲ ಸಮಸ್ಯೆಗಳಿಗೆ ಅಭಿವೃದ್ಧಿಯೊಂದೇ ಮಂತ್ರ. ಅದಕ್ಕಷ್ಟೇ ನಾವು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ನಮ್ಮ ಸುತ್ತಲಿನ ಶಕ್ತಿಗಳು ನಾವು ತುಳಿಯುತ್ತಿರುವ ದಾರಿಯ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಬಹುದು. ಆದರೆ ನಮ್ಮವರು ಅದಾವುದಕ್ಕೂ ಎದೆಗುಂದಬಾರದು. ಅಭಿವೃದ್ಧಿಯೊಂದೇ ನಮ್ಮ ಮಂತ್ರ.ನಾವು ಅದಕ್ಕಷ್ಟೇ ಸೀಮಿತವಾಗಿರೋಣ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ  ಎರಡು ದಿನಗಳಿಂದ ನಡೆದ ಬಿಜೆಪಿ ಕಾರ್ಯಕಾರಿಣಿಯ  ಸಮಾರೋಪದಲ್ಲಿ ಮಾತನಾಡಿದ ಅವರು ಅನಗತ್ಯವಾದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ದೇಶದ ಅಭಿವೃದ್ಧಿಯ ಕಡೆ ಮಾತ್ರ ಗಮನ ಹರಿಸಬೇಕು ಎಂದರು.

ಹಿಂದಿನ ಯಾವುದೇ ಸರ್ಕಾರಗಳು 65 ವರ್ಷಗಳಲ್ಲಿ ಸಾಧಿಸದ ಯಶಸ್ಸು ನಮ್ಮ ಪಾಲಾಗಿದೆ. ಪ್ರತೀ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡುವ ಮೂಲಕ ನಾವು ಸಾಧನೆಯ ಉತ್ತುಂಗಕ್ಕೇರಿದ್ದೇವೆ. ಕಳೆದ 22 ತಿಂಗಳ ನಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ನಡೆದಿಲ್ಲ. ಆರೋಪ ಮುಕ್ತ ಸರ್ಕಾರ ನಮ್ಮದಾಗಬೇಕು. ಭೇಟಿ ಬಚಾವೊ, ಭೇಟಿ ಪಡಾವೊದಂತಹ ಯೋಜನೆಗಳ ಅಭಿಯಾನಕ್ಕೆ ಕಾರ್ಯಕರ್ತರು ಮುಂದಾಗಬೇಕು,'' ಎಂದು ಮೋದಿ ಪ್ರತಿಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!