ದೇಶ

ಪ್ರಧಾನಿ ಮತ್ತವರ ಸಂಪುಟ ಸಹೋದ್ಯೋಗಿಗಳ ವಿದೇಶಿ ಪ್ರವಾಸದ ವೆಚ್ಚ ಬರೋಬ್ಬರಿ 567 ಕೋಟಿ!

Shilpa D

ನವದೆಹಲಿ: 2015-16 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳ ವಿದೇಶ ಪ್ರವಾಸಕ್ಕಾಗಿ ಬರೋಬ್ಬರಿ 567 ಕೋಟಿ ರು. ಹಣ ಖರ್ಚಾಗಿದೆ.

ಈ ವೆಚ್ಚ ಕಳೆದ ವರ್ಷಕ್ಕಿಂತ ಶೇ. 80ರಷ್ಟು ಹೆಚ್ಚಾಗಿದೆ.  2015-16 ನೇ ಸಾಲಿನ ಬಜೆಟ್ ನಲ್ಲಿ  ನಿಗದಿ ಪಡಿಸವಾಗಿದ್ದ 269 ಕೋಟಿ.ರುಗಿಂತ ಬಹಳ ಹೆಚ್ಚು ವಿನಿಯೋಗಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಕಳೆದ ಮೂರು ವರ್ಷಗಳಲ್ಲಿ ಅಧಿಕಾರಿಗಳ ಪ್ರವಾಸ ವೆಚ್ಚ 1500 ಕೋಟಿ ರು ಹೆಚ್ಚಾಗಿದೆ.

ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ 2010 ರಿಂಜದ 2014 ರವರೆಗೆ  ಪ್ರಧಾನಿ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಸುಮಾರು 1500 ಕೋಟಿ ರು. ಹಣವನ್ನು ಪ್ರವಾಸಗಳಿಗೆ ವಿನಿಯೋಗಿಸಿದ್ದರು.  ಆದರೆ ಎನ್ ಡಿಎ  ಸರ್ಕಾರ ಕೇವಲ 3 ವರ್ಷಗಳಲ್ಲಿ 1,140 ಕೋಟಿ ಹಣ ವೆಚ್ಚ ಮಾಡಿದೆ.

ಇನ್ನು ತಮ್ಮ ಸರ್ಕಾರದ ವಿದೇಶ ಪ್ರವಾಸಗಳಿಗೆ ಮಾಡುವ ವೆಚ್ಚವನ್ನು ಶೇ.54 ರಷ್ಚುಕಡಿತ ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ,

SCROLL FOR NEXT