ದೇಶ

ಕೇರಳ ವಿಧಾನಸಭೆ ಚುನಾವಣೆ: ಮಾಜಿ ಕ್ರಿಕೆಟಿಗ ಶ್ರೀಶಾಂತ್ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ

Lingaraj Badiger

ಕೊಚ್ಚಿ: ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಾಜಿ ಕ್ರಿಕೆಟಿಗ, ವೇಗದ ಬೌಲರ್ ಎಸ್. ಶ್ರೀಶಾಂತ್ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಸಂಬಂಧ ಪಕ್ಷ ಈಗಾಗಲೇ ಶ್ರೀಶಾಂತ್ ಅವರನ್ನು ಸಂಪರ್ಕಿಸಿದ್ದು, ಆದರೆ ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಶ್ರೀಶಾಂತ್ ಒಪ್ಪಿಗೆ ನೀಡಿದ ಪಕ್ಷದಲ್ಲಿ ಅಬಕಾರಿ ಸಚಿವ ಕೆ. ಬಾಬು ವಿರುದ್ಧ ತ್ರಿಪ್ಪುನಿತುರಾದಲ್ಲಿ ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ ಎಂದು ಮಾಹಿತಿ ಲಭಿಸಿದೆ. ಶ್ರೀಶಾಂತ್ ಕೂಡ ಮೇಲ್ನೋಟಕ್ಕೆ ಮನಸ್ಸು ಮಾಡಿದ್ದು, ಇದರಿಂದಾಗುವ ಆಗು-ಹೋಗುಗಳ ಬಗ್ಗೆ ಚಿಂತಿಸಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಚಾರವನ್ನು ಕುಟುಂಬದ ಸದಸ್ಯರೊಡನೆ ಮಾತುಕತೆ ನಡೆಸಿದ ನಂತರ ತಿಳಿಸುವುದಾಗಿ ಶ್ರೀಶಾಂತ ಹೇಳಿದ್ದಾರೆ. 2013ರಲ್ಲಿ ನಡೆದ ಐಪಿಎಲ್ 6ನೇ ಆವೃತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಶ್ರೀಶಾಂತ್ ಅವರನ್ನು ಬಂಧಿಸಲಾಗಿತ್ತು. ಆದರೆ ಸೂಕ್ತ ಸಾಕ್ಷ್ಯಾರ ಇಲ್ಲದ ಕಾರಣ ಪ್ರಕರಣವನ್ನು ದೆಹಲಿ ಹೈಕೋರ್ಟ್ ಖುಲಾಸೆ ಮಾಡಿತ್ತು.

SCROLL FOR NEXT