ಮುಂಬೈ: ಮಹಾರಾಷ್ಟ್ರ ಸರ್ಕಾರ ಮಕ್ಕಳಿಗಿಂದ ಪ್ರಾಣಿಗಳ ಮೇವು ಶಿಬಿರಕ್ಕೆ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅನಿಲ್ ಬೊಂಡೆ ಆರೋಪಿಸಿದ್ದಾರೆ.
ಈ ಕುರಿತಂತೆ ಮುಂಬೈನಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರ ಪ್ರಾಣಿಗಳ ಮೇವು ಶಿಬಿರಕ್ಕೆ ರು.70 ಪಾವತಿ ಮಾಡುತ್ತಿದ್ದರೆ, ಮಕ್ಕಳ ಆಹಾರಕ್ಕಾಗಿ ಮಾತ್ರ ದಿನಕ್ಕೆ ರು.30 ಪಾವತಿ ಮಾಡುತ್ತಿದೆ. ಇದರಂತೆ ಒಂದುವಿನ ಪೋಷಣೆಗೆ ತಿಂಗಳಿಗೆ ರು.900 ಆಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಮಕ್ಕಳಿಗೆ ನೀಡುವ ಹಣವನ್ನು ತಿಂಗಳಿಗೆ 900 ರಿಂದ 1,500ಕ್ಕೆ ಏರಿಕೆ ಮಾಡಬೇಕುಎಂದು ಹೇಳಿದ್ದಾರೆ.
ಬರಪೀಡಿತ ಲಾತೂರ್ ನಲ್ಲಿ ಇದೀಗ 255 ಮೇವು ಶಿಬಿರಗಳಿದ್ದು, ಒಸ್ಮಾನಾಬಾದ್ ಹಾಗೂ ಬೀಡ್ ಜಿಲ್ಲೆಗಳಲ್ಲಿಯೇ ಕಳೆದ ಆಗಸ್ಟ್ ತಿಂಗಳಿನಿಂದ ಇಲ್ಲಿರುವರೆಗೂ ರಾಜ್ಯ ಸರ್ಕಾರ ರು.60 ಕೋಟಿ ಹಣವನ್ನು ಖರ್ಚು ಮಾಡಿದೆ.
ಇನ್ನು ರಾಜ್ಯದಲ್ಲಿ 1,105 ಮಕ್ಕಳ ಪೋಷಣಾ ಕೇಂದ್ರಗಳಿದ್ದು, ಇದರಲ್ಲಿ 1,062 ಕೇಂದ್ರಗಳನ್ನು ನೋಂದಾಯಿತ ಎನ್ ಜಿಒ ಸಂಸ್ಥೆಗಳು ನೋಡಿಕೊಳ್ಳುತ್ತಿದೆ. ಇದಕ್ಕೆ ಸರ್ಕಾರ ಒಂದು ಮಗುವಿಗೆ ತಿಂಗಳಿಗೆ ರು.900ರನ್ನು ಪಾವತಿ ಮಾಡುತ್ತಿದೆ. ಅಂದರೆ ದಿನಕ್ಕೆ ಒಂದುವಿನ ಪೋಷಣೆಗೆ ರು. 30 ಆಗುತ್ತದೆ. ಇನ್ನು ವಿಶೇಷ ಮಕ್ಕಳಿಗೆ ತಿಂಗಳಿಗೆ ರು. 990 (ರು.33 ದಿನಕ್ಕೆ) ಪಾವತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ತಿಳಿಸಿರುವಂತೆ ಸರ್ಕಾರ ಕಳೆದ ಮೂರುವ ವರ್ಷಗಳಿಂದಲೂ ಎನ್ ಜಿಎ ಸಂಸ್ಥೆಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ನಮ್ಮ ಇಲಾಖೆ ಸರ್ಕಾರವನ್ನು ರು.156 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ಈ ವರೆಗೂ ಹಣಕಾಸು ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ.
ಇನ್ನು ಸರ್ಕಾರ ನೊಂದಾಯಿತ ಎನ್ ಜಿಎ ಸಂಸ್ಥೆಗಳಿಗೆ ಸಮಾಜಿಕ ಕಾರ್ಯಗಳಿಗಾಗಿ ಪ್ರೊತ್ಸಾಹ ಧನವನ್ನು ಹೆಚ್ಚಿಸಬೇಕು. ಆದರೆ, ಇದನ್ನು ಸರ್ಕಾರ ಮಾಡುತ್ತಿಲ್ಲ. ಮಕ್ಕಳಿಗೆ ಸೂಕ್ತ ರೀತಯ ವ್ಯವಸ್ಥೆ ಕಲ್ಪಿಸುವುದು, ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.