ಸಾಂಕೇತಿಕ ಚಿತ್ರ 
ದೇಶ

ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಬಳಸಿ ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆ

ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯ ಕಾಕದ್ವೀಪ್‌ನಲ್ಲಿ ಕಳೆದ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್‌ನ...

ಕಾಕದ್ವೀಪ್‌ : ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯ ಕಾಕದ್ವೀಪ್‌ನಲ್ಲಿ ಕಳೆದ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ತೃಣಮೂಲ ಕಾಂಗ್ರೆಸ್‌ನ ನಾಯಕರೊಬ್ಬರ ಮೇಲೆ ಕಚ್ಚಾ ಬಾಂಬ್‌ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುನ್ನವೇ ನಡೆದಿರುವ ಈ ಕಗ್ಗೊಲೆ ಈ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ.

ಟಿಎಂಸಿ ನಾಯಕ ಹಾಜಿ ಅಬ್ದುಲ್‌ ಜಹೇಲ್‌ ಮುಲ್ಲಾ (75), ಸ್ಥಳೀಯ ಟಿಎಂಸಿ ಅಭ್ಯರ್ಥಿ ಮಂತುರಾಮ್‌ ಪಕೀರಾ ಅವರ ಪರ ಚುನಾವಣಾ ಪ್ರಚಾರಾಭಿಯಾನದ ಸಭೆ ಮುಗಿಸಿ ರಾತ್ರಿ 11.30ರ ಹೊತ್ತಿಗೆ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಅಬ್ದುಲ್‌ ಜಹೇಲ್‌ ಅವರನ್ನು ಅಪರಿಚಿತ ಹಂತಕರು ಕಚ್ಚಾ ಬಾಂಬ್ ಸಿಡಿಸಿ ಕೊಂದಿದ್ದಾರೆ. ದಾಳಿಯ ತೀವ್ರತೆಯಿಂದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.

ಈ ಕೃತ್ಯ ನಡೆಯುತ್ತಿದ್ದಂತೆಯೇ ಜನರು ಸ್ಥಳದಲ್ಲಿ ಜಮಾಯಿಸಿತೊಡಗಿದಾಗ ಹಂತಕರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಬೆದರಿಸುತ್ತಾ ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.

ಈ ಕೊಲೆ ಕೃತ್ಯದ ಹಿಂದೆ ಸಿಪಿಎಂ ಕಾರ್ಯಕರ್ತರ ಕೈವಾಡವಿರಬಹುದೆಂದು ಟಿಎಂಸಿ ಆರೋಪಿಸಿದೆ. ಆದರೆ ಪಕ್ಷದೊಳಗಿನ ಬಣಗಳ ಜಗಳದಿಂದಾಗಿ ಅಬ್ದುಲ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಿಪಿಎಂ ಹೇಳಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT