ದೇಶ

ಜೀಸಸ್ ಅವರ ಸಹಾನುಭೂತಿ ಆಲೋಚನೆಗಳನ್ನು ನೆನಪಿಸುವ ದಿನ ಗುಡ್ ಫ್ರೈಡೆ: ಪ್ರಧಾನಿ

Sumana Upadhyaya

ನವದೆಹಲಿ: ಯೇಸುವಿನ ಧಾರ್ಮಿಕ ಮತ್ತು ಸಹಾನುಭೂತಿಯ ಆಲೋಚನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿ ಗುಡ್ ಫ್ರೈಡೆಯನ್ನು ಆಚರಿಸುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಡ್ ಫ್ರೈಡೆಯು ಪ್ರಾರ್ಥನೆ ಸಲ್ಲಿಸುವ ಮತ್ತು ಜೀಸಸ್ ಕ್ರೈಸ್ಟ್ ಅವರ ಶ್ರೇಷ್ಠ, ಧಾರ್ಮಿಕ ಮತ್ತು ಸಹಾನುಭೂತಿಯ ಆಲೋಚನೆಗಳನ್ನು ಸ್ಮರಿಸುವ ದಿನವಾಗಿದೆ. ಜೀಸಸ್ ಅವರು ಹಲವರ ಬಾಳಿಗೆ ಬೆಳಕಾಗಿದ್ದಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಜೀಸಸ್ ನ್ನು ಶಿಲುಬೆಗೇರಿಸಿದ ನೆನಪಿಗಾಗಿ ಕ್ರೈಸ್ತ ಬಾಂಧವರು ಗುಡ್ ಫ್ರೈಡೆ ಎಂದು ಆಚರಿಸುತ್ತಾರೆ.

SCROLL FOR NEXT