ದೇಶ

ಒನ್‌ವೇ ಲವ್ವರ್ ನಿಂದ ಕೊಲೆಯಾದಳು ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರ್ತಿ

Vishwanath S

ಕೊಲ್ಕತಾ: ಪ್ರೀತಿಗೆ ಒಪ್ಪದ ರಾಷ್ಟ್ರಮಟ್ಟದ ವಾಲಿಬಾಲ್‌ ಆಟಗಾರ್ತಿಯನ್ನು ಒನ್ ವೇ ಲವ್ವರ್ ದಾರುಣವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.

ಎರಡು ಬಾರಿ ರಾಷ್ಟ್ರ ಮಟದಲ್ಲಿ ಮತ್ತು ಮೂರು ಬಾರಿ ರಾಜ್ಯ ಮಟ್ಟದಲ್ಲಿ ವಾಲಿಬಾಲ್‌ ಪಂದ್ಯಗಳನ್ನು ಆಡಿರುವ 9ನೇ ತರಗತಿ ವಿದ್ಯಾರ್ಥಿನಿ 14ರ ಹರೆಯದ ಸಂಗೀತಾ ಹತ್ಯೆಯಾಗಿರುವ ನತದೃಷ್ಟೆ. ತನ್ನ ಸ್ನೇಹಿತೆಯರ ಜತೆಗೆ ಅಭ್ಯಾಸದಲ್ಲಿ ತೊಡಗಿದ್ದಾಗ ಆಕೆಯ ಒನ್‌ವೇ ಲವ್ವರ್ 20 ವರ್ಷ ಪ್ರಾಯದ ಸುಬ್ರತಾ ಸಿನ್ಹಾ ಕೊಚ್ಚಿ ಕೊಲೆ ಮಾಡಿದ್ದಾನೆ.

ಸಂಗೀತಾಳ ಹಿಂದೆ ಬಿದ್ದಿದ್ದ ಸುಬ್ರತಾ ಹಲವು ಬಾರಿ ಆಕೆಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಇದಕ್ಕೆ ಸಂಗೀತಾ ಸೊಪ್ಪು ಹಾಕಿರಲಿಲ್ಲ. ಇದರಿಂದಾಗಿ ವಿಚಲಿತನಾದ ಸುಬ್ರತಾ ಆಕೆಯನ್ನು ಕೊಚ್ಚಿ ಕೊಲೆಗೈವ ಮೂಲಕ ತೀರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT