ಸಾಂದರ್ಭಿಕ ಚಿತ್ರ 
ದೇಶ

ಕಲ್ಲಿದ್ದಲು ಹಗರಣ: ಜಾರ್ಖಂಡ್ ಇಸ್ಪಾಟ್ ನಿರ್ದೇಶಕರು ತಪ್ಪಿತಸ್ಥರು- ಕೋರ್ಟ್ ತೀರ್ಪು

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಥಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯವು ಪ್ರಕಟಿಸಿದ್ದು, ಜಾರ್ಖಂಡ್ ಇಸ್ಪಾಟ್...

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಥಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯವು ಪ್ರಕಟಿಸಿದ್ದು, ಜಾರ್ಖಂಡ್ ಇಸ್ಪಾಟ್ ಕಂಪನಿಯ ಇಬ್ಬರು ನಿರ್ದೇಶಕರು ತಪ್ಪಿಸ್ಥರು ಎಂದು ಹೇಳಿದೆ. 
ಜಾರ್ಖಂಡ್ ನ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಅವ್ಯವಹಾರದಲ್ಲಿ ಜಾರ್ಖಂಡ್ ಇಸ್ಪಾಟ್ ಕಂಪೆನಿಯ ಇಬ್ಬರು ನಿರ್ದೇಶಕರು ಭಾಗಿಯಾಗಿರುವುದು ಸಾಬೀತಾಗಿದ್ದು, ಐಪಿಸಿ ಅಡಿಯಲ್ಲಿ ದುಷ್ಕೃತ್ಯ ಗೂಢಾಲೋಚನೆ ಮತ್ತು ವಂಚನೆ ಮಾಡಲಾಗಿದೆ ಎಂದು ನ್ಯಾಯಾಧೀಶ ಭರತ್ ಪರಾಶರ್ ತೀರ್ಪು ನೀಡಿದ್ದಾರೆ. 
ಕಂಪನಿ ನಿರ್ದೇಶಕರಾದ ಆರ್ ಎಸ್ ರಂಗ್ಟಾ ಮತ್ತು ಆರ್ ಸಿ ರಂಗ್ಟಾ ಅವರನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಕೋರ್ಟ್ ಆದೇಶಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 31ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ. 
ಆರ್ ಸಿ ರಂಗ್ಟಾ ಗ್ರೂಪ್ ಗೆ ಸೇರಿದ ಜಾರ್ಖಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 2006ರ ಜನವರಿ 13ರಂದು ದಕ್ಷಿಣ ಧಾದು ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಲಾಗಿತ್ತು ಎಂದು ಸಿಬಿಐ ಹೇಳಿತ್ತು. 
ಕಂಪನಿಯ ನಿರ್ದೇಶಕರಾದ ಆರ್ ಎಸ್ ರಂಗ್ಟಾ ಮತ್ತು ಆಸ್ ಸಿ ರಂಗ್ಟಾ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳು. ತಪ್ಪು ದಾಖಲೆಗಳನ್ನು ನೀಡುವ ಮೂಲಕ ಕಲ್ಲಿದ್ದಲು ಹಂಚಿಕೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಸಿಬಿಐ ವರದಿ ನೀಡಿತ್ತು. ಜನವರಿ 14ರಂದು ನಿರ್ದೇಶಕರಾದ ರಂಗ್ಟಾ ಅವರಿಗೆ ತಲಾ ರು.1 ಲಕ್ಷ ಬಾಂಡ್, ಶ್ಯೂರಿಟಿ ಮೇಲೆ ಜಾಮೀನು ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!