ದೇಶ

ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಮಾರ್ಗ ಸೂಚಿಸಲು ಕೇಂದ್ರಕ್ಕೆ 2 ವಾರಗಳ ಕಾಲಾವಕಾಶ

Srinivas Rao BV

ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಮಾರ್ಗಗಳನ್ನು ಸೂಚಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ.
ಪೋರ್ನ್ ಸೈಟ್ ಗಳನ್ನು ನಿಷೇಧಿಸುವುದಕ್ಕೆ ಕೇಂದ್ರ ಸರ್ಕಾರ ಈ ಹಿಂದೆ ಇಂಟರ್ ನೆಟ್ ಸೇವೆ ಒದಗಿಸುವ ಆಪರೇಟರ್ ಗಳಿಗೆ ನೀಡಿದ್ದ ನಿರ್ದೇಶನಗಳನ್ನು ಪರಿಶೀಲಿಸಿರುವ ನ್ಯಾಯಾಲಯ, " ನ್ಯಾಯಾಲಯದ ಹಿಂದಿನ ಆದೇಶದ ಕಾರ್ಯಗತಗೊಳಿಸುವಿಕೆಯೊಂದಿಗೆ ಕೆಲವು ಸಲಹೆಗಳನ್ನು ಸಲ್ಲಿಸಲಾಗಿದೆ, ಮಕ್ಕಳ ಅಶ್ಲೀಲ ಚಿತ್ರ ನಿಷೇಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಲಹೆ ಸಲ್ಲಿಸಲು ಕೇಂದ್ರ ಸರ್ಕಾರ ಎರಡು ವಾರಗಳ ಕಾಲಾವಕಾಶ ಕೇಳಿದ್ದು ವಿಚಾರಣೆಯನ್ನು ಏ.18 ಕ್ಕೆ ಮುಂದೂಡಲಾಗಿದೆ ಎಂದು ನ್ಯಾ.ದೀಪಕ್ ಮಿಶ್ರ ಹೇಳಿದ್ದಾರೆ.
ಮಕ್ಕಳ ಅಶ್ಲೀಲ ಚಿತ್ರ ನಿಷೇಧಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, " ಸರಣಿ ರಜೆಗಳಿದ್ದ ಕಾರಣ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸಲು ಸಾಧ್ಯವಾಗಿಲ್ಲ, ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಕ್ಕೆ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರ್ಟ್ ಗೆ ಮನವಿ ಸಲ್ಲಿಸಿದರು.
ಮಕ್ಕಳ ಅಶ್ಲೀಲ ಚಿತ್ರ ನಿಷೇಧ ಮಾಡಲು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದ ಕಮಲೇಶ್ ವಾಸ್ವಾನಿ ಪರ ವಕೀಲರು ನಿಷೇಧಕ್ಕೆ ಇರುವ ಮಾರ್ಗಗಳ ಕುರಿತು ಕೋರ್ಟ್ ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

SCROLL FOR NEXT