ಗುವಾಹಟಿ: ಸರ್ಕಾರ ಉರುಳಿಸಲು ಬಿಜೆಪಿ 100 ಕೋಟಿ ರು. ಹಣ ವ್ಯಮಾಡುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗಗೋಯ್ ಆರೋಪಿಸಿದ್ದಾರೆ.
ರಾಜ್ಯಪಾಲರ ನೆರವು ಪಡೆದು ಕೊಂಡು ಬಿಜೆಪಿ ಹಿಮಾಚಲ ಪ್ರದೇಶ ಸರ್ಕಾರವನ್ನು ಕೆಡವುತ್ತಿದೆ. ಎಂದು ಹೇಳಿರುವ ಗಗೋಯ್ ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಹೆಚ್ಚೆಚ್ಚು ಹಣ ವ್ಯಯಿಸಿ ಅಸ್ಸಾಂ ಸರ್ಕಾರವನ್ನು ಕೆಡವಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ನ ಕೆಲ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನ ನಡೆಸಿತು. ಆದರೆ ಅದು ಸಫಲವಾಗಲಿಲ್ಲ ಎಂದು ಆರೋಪಿಸಿದ್ದಾರೆ.
ಅಸ್ಸಾಂ ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ರ್ಯಾಲಿ ಸಂಬಂಧ ವಾಗ್ದಾಳಿ ನಡೆಸಿದ ಗಗೋಯ್ , ಅಸ್ಸಾಂ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.ಕೇಂದ್ರ ಸರ್ಕಾರ ಅಸ್ಸಾಂಗೆ ಖಾಯಂ ರಾಜ್ಯಪಾಲರನ್ನು ನೇಮಿಸದೇ ಆರ್ ಎಸ್ ಎಸ್ ನ ವ್ಯಕ್ತಿಗಳನ್ನು ಕಂದು ಕೂರಿಸಿದೆ ಎಂದು ಆರೋಪಿಸಿದ್ದಾರೆ,