ದೇಶ

ಕಾಂಗ್ರೆಸ್ ದೇಶವನ್ನು ಒಡೆಯಲು ಯತ್ನಿಸುತ್ತಿದೆ: ಸ್ಮೃತಿ ಇರಾನಿ

Srinivas Rao BV

ಅಸ್ಸಾಂ: ಯೋಧರ ತ್ಯಾಗಗಳನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ದೇಶವನ್ನು ಒಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಸ್ಮೃತಿ ಇರಾನಿ, ಕಾಂಗ್ರೆಸ್ ತನ್ನ ರಾಜಕೀಯ ಹಿತಾಸಕ್ತಿಗಾಗಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ, ಅಂತಹ ಪಕ್ಷಕ್ಕೆ ನಿಮ್ಮ ಓಟನ್ನು ಪಡೆಯುವ ಅರ್ಹತೆ ಇದೆಯಾ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.   
ದೇಶವನ್ನು ಒಡೆಯುವ ಮನಸ್ಥಿತಿ ಇರುವ  ಕಾಂಗ್ರೆಸ್ ಗೆ ನಿಮ್ಮ ಮತ ಪಡೆಯುವ ಅರ್ಹತೆ ಇಲ್ಲ. ಹಾಗಿದ್ದರೆ ಎಲ್ಲರಿಗೂ ಬಿಜೆಪಿಗೆ ಮತ ನೀಡುವಂತೆ ಕೇಳಿ ಅಸ್ಸಾಂ ನ ಭವಿಷ್ಯವನ್ನು ಉಜ್ವಲಗೊಳಿಸಿ ಎಂದು ಸ್ಮೃತಿ ಇರಾನಿ ಕರೆ ನೀಡಿದ್ದಾರೆ. ಅಸ್ಸಾಂ ನ ಯುವಜನತೆಗೆ ಕೆಲಸ ಮಾಡಾಬೇಕೆಂದಿದೆ. ಆದರೆ ಅವರು ನೌಕರಿ ಪಡೆಯಬೇಕಾದರೆ ಟೇಬಲ್ ಮೇಲೆ ಹಣವಿಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಯುವಕರು ಉದ್ಯಮ ಪ್ರಾರಂಭಿಸಬೇಕೆಂದರೆ ತಾಯಿಯ ಒಡವೆ ಅಥವಾ ತಂದೆಯ ಜಮೀನು ಅಡವಿಟ್ಟು ಬ್ಯಾಂಕ್ ಗಳಿಂದ ಸಾಲ ಪಡೆಯಬೇಕಾಗುತ್ತದೆ ಇಷ್ಟೆಲ್ಲಾ ಇದ್ದ ಮೇಲೆ ಯುವಕರು ಬ್ಯಾಂಕ್ ಬಳಿ ಏಕೆ ಸಾಲ ಪಡೆಯಬೇಕು ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.  ಯುವಕರು ಏನನ್ನೂ ಅಡ ಇಡದೆ ಸುಲಭವಾಗಿ ಸಾಲ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮುದ್ರಾ ಲೋನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇಂತಹ ಯೋಜನೆಯನ್ನು ಈ ವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿಲ್ಲ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.

SCROLL FOR NEXT