ಉತ್ತರಾಖಂಡ್, ಹೈಕೋರ್ಟ್ - ಹರೀಶ್ ರಾವತ್ 
ದೇಶ

ಉತ್ತರಾಖಂಡ್: ನಾಳೆ ನಡೆಯಬೇಕಿದ್ದ ರಾವತ್ ವಿಶ್ವಾಸಮತಕ್ಕೆ ಹೈಕೋರ್ಟ್ ತಡೆ

ಉತ್ತರಾಖಂಡ್ ದಲ್ಲಿನ ರಾಷ್ಟ್ರಪತಿ ಆಡಳಿತಕ್ಕೆ ತಡೆ ನೀಡಿ, ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತಿಪಡಿಸಲು ಅವಕಾಶ...

ಡೆಹ್ರಾಡೂನ್: ಉತ್ತರಾಖಂಡ್ ದಲ್ಲಿನ ರಾಷ್ಟ್ರಪತಿ ಆಡಳಿತಕ್ಕೆ ತಡೆ ನೀಡಿ, ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಬಹುಮತ ಸಾಬೀತಿಪಡಿಸಲು ಅವಕಾಶ ನೀಡಿದ್ದ ಉತ್ತರಾಖಂಡ್ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ಬುಧವಾರ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ನಾಳೆ ನಡೆಯಬೇಕಿದ್ದ ರಾವತ್ ವಿಶ್ವಾಸಮತಕ್ಕೆ ತಡೆ ನೀಡಿದೆ.
ರಾಜ್ಯದಲ್ಲಿ ಈಗಾಗಲೇ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ 'ನೀವು ಒಂದು ವೇಳೆ ವಿಶ್ವಾಸಮತಕ್ಕೆ ಅವಕಾಶ ನೀಡಿದೆ, ಎರಡು ಸರ್ಕಾರಗಳನ್ನು ರಚನೆ ಮಾಡಿದಂತಾಗುತ್ತದೆ. ಹೀಗಾಗಿ ವಿಶ್ವಾಸಮತಕ್ಕೆ ಅವಕಾಶ ನೀಡಿರುವ ಏಕ ಸದಸ್ಯ ಪೀಠದ ಆದೇಶವನ್ನು' ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ತನ್ನ ವಾದ ಮಂಡಿಸಿತು. ವಾದ ಆಲಿಸಿದ ಕೋರ್ಟ್ ವಿಶ್ವಾಸಮತಕ್ಕೆ ತಡೆ ನೀಡಿ  ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ಉತ್ತರಾಖಂಡ್ ದಲ್ಲಿನ ರಾಷ್ಟ್ರಪತಿ ಆಡಳಿತಕ್ಕೆ ತಡೆ ನೀಡಿದ್ದ ಹೈಕೋರ್ಟ್, ಮಾರ್ಚ್ 31ಕ್ಕೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸೂಚಿಸಿತ್ತು,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್