ದೇಶ

ಸರ್ಕಾರದ ಸಾಧನೆಗಳನ್ನು ಹೈಲೈಟ್ಸ್ ಮಾಡುವಂತೆ ಸಂಸದರಿಗೆ ಮೋದಿ ಕರೆ

Shilpa D

ನವದೆಹಲಿ: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎನ್ ಡಿ ಎ ಸರ್ಕಾರದ ಸಾಧನೆಗಳನ್ನು ಹೈಲೈಟ್ಸ್ ಮಾಡಿ ಜನರಿಗೆ ತಿಳಿಸುವಂತೆ ಪ್ರಧಾನಿ ಮೋದಿ ಸಂಸದರಿಗೆ ತಿಳಿಸಿದ್ದಾರೆ.

ಕೇಂದ್ರ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮುದ್ರಾ ಯೋಜನೆ, ಎಲ್ ಪಿಜಿ ವಿತರಣೆಯಲ್ಲಿ ಹೆಚ್ಚಳ, ಗ್ರಾಮಗಳಿಗೆ ವಿದ್ಯುತ್ ಸೇರಿದಂತೆ ಹಲವು ಪ್ರಮುಖ ಸಾಧನೆಗಳನ್ನು ಪಟ್ಟಿ ಮಾಡಿ ದೇಶದ ಜನತೆ ಮುಂದಿಡುವಂತ ಮೋದಿ ಸೂಚಿಸಿದ್ದಾರೆ.

ದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಈ ವಿಚಾರಗಳನ್ನು ಸಂಸದರ ಗಮನಕ್ಕೆ ತಂದಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಭಾಗವಹಿಸಿದ್ದರು.

ವಿವಿಐಪಿ ಚಾಪರ್ ಹಗರಣದಲ್ಲಿ ಬಿಜೆಪಿ  ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ್ದು, ರಾಜ್ಯ ಸಭೆಯಲ್ಲಿ ಈ ಸಂಬಂಧ ಚರ್ಚಿಸಲು ತಯಾರಿ ಸಹ ನಡೆಸಲಾಗಿದೆ,

ಹಿರಿಯ ನಾಯಕ ಎಲ್.ಕೆ ಅಡ್ವಾಣಿ  ನಿನ್ನೆ ನಿಧನರಾದ ಆರ್ ಎಸ್ ಎಸ್  ಮುಖಂಡ ಬಲ್ ರಾಜ್ ಮುದೋಕ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಎನ್ ಡಿ ಎ ಸರ್ಕಾರವೂ ಮುದ್ರಾ ಯೋಜನೆಯನ್ನು ಇನ್ನೆರಡು ವರ್ಷದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ, 3 ಕೋಟಿ ಕುಟುಂಬಗಳಿಗೆ ಎಲ್ ಪಿಜಿ ಸೇವೆ ವಿಸ್ತರಣೆ, ಅತಿ ಕಡಿಮೆ ದರದಲ್ಲಿ ಎಲ್ ಇಡಿ ಲೈಟ್ ಗಳನ್ನು ನೀಡುತ್ತಿರುವುದು ಎನ್ ಡಿಎ ಸರ್ಕಾರದ ಸಾಧನೆ ಎಂದು ಕೇಂದ್ ಸಚಿವ ರಾಜೀವ್ ಪ್ರತಾಪ್ ರುಡಿ ತಿಳಿಸಿದ್ದಾರೆ.

SCROLL FOR NEXT