ನವದೆಹಲಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಗ್ರಾಮವೊಂದಕ್ಕೆ ಭೇಟಿ ನೀಡಿದ ಸಾಕ್ಷಿ ಮಹರಾಜ್, ಅಲ್ಲಿನ ಬಾಲಕಿಯೊಬ್ಬಳಿಗೆ ಗಾಯ ಎಲ್ಲಿ ಆಗಿದೆ ಅಂತ ನೋಡ್ತೀನಿ, ಜೀನ್ಸ್ ಬಿಚ್ಚಿ ಎಂದಿದ್ದಾರೆ.
ಸಾಕ್ಷಿ ಮಹರಾಜ್‌ರ ಸುತ್ತಲೂ ಮಹಿಳೆಯರು ಸೇರಿದಂತೆ ಹಲವಾರು ಜನ ಇದ್ದರು. ಅಲ್ಲಿನ ಗ್ರಾಮದವರೊಡನೆ ಮಾತನಾಡುತ್ತಿದ್ದ ಸಾಕ್ಷಿ ಮಹರಾಜ್, ಬಾಲಕಿಯೊಬ್ಬಳಲ್ಲಿ ಜೀನ್ಸ್ ಬಿಚ್ಚಿ ಗಾಯ ತೋರಿಸುವಂತೆ ಹೇಳಿದ್ದಾರೆ.
ಸಾಕ್ಷಿ ಮಹರಾಜ್‌ರ ಈ ಅಸಭ್ಯ ವರ್ತನೆಯ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸಾಕ್ಷಿ ಮಹರಾಜ್ ಹಾಗೆ ಹೇಳಿದ್ದು ಯಾಕೆ?
ಇಲ್ಲಿನ ಫರ್ದಾಪುರ್ ಗ್ರಾಮದಲ್ಲಿನ ಬಿಜೆಪಿ ಕಾರ್ಯಕರ್ತ ಮೈದಾನ್ ಸಿಂಗ್ ಅವರ ಮನೆಯಲ್ಲಿ ಭಾಷಣ ಮಾಡಿದ್ದರು. ಅನಂತರ ಪೊಲೀಸರು ಮದ್ಯ ಮಾರಾಟ ದಂಧೆಯ ಆರೋಪದಲ್ಲಿ ಮೈದಾನ್ ಸಿಂಗ್ ಅವರ ಮನೆಗೆ ದಾಳಿ ಮಾಡಿದ್ದರು. ದಾಳಿ ಮಾಡುವಾಗ ಅಲ್ಲಿ ಮಹಿಳಾ ಪೊಲೀಸರು ಇರಲಿಲ್ಲ. ಪೊಲೀಸರು ಮೈದಾನ್ ಸಿಂಗ್ ಅವರ ಇಬ್ಬರು ಹೆಣ್ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಾಕ್ಷಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮೈದಾನ್ ಸಿಂಗ್ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರನ್ನು ಶೂಟ್ ಮಾಡುವುದಾಗಿ ಸಾಕ್ಷಿ ಬೆದರಿಕೆಯನ್ನೊಡ್ಡಿದ್ದಾರೆ.
ಪೊಲೀಸರು ಹೆಣ್ಮಕ್ಕಳ ಜತೆ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಇಬ್ಬರು ಹೆಣ್ಮಕ್ಕಳಲ್ಲಿ ಓರ್ವ ಬಾಲಕಿಗೆ ಗಾಯ ತೋರಿಸಿ ಎಂದು ಹೇಳಿ ಎಲ್ಲರ ಮುಂದೆಯೇ ಜೀನ್ಸ್ ಬಿಚ್ಚುವಂತೆ ಸಾಕ್ಷಿ ಮಹರಾಜ್ ಹೇಳಿದ್ದರು.
ಪೊಲೀಸರನ್ನು ಶೂಟ್ ಮಾಡುತ್ತೀನಿ ಎಂದು ಬೆದರಿಕೆಯೊಡ್ಡಿರುವ ಸಾಕ್ಷಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153, 505 (1) (ಬಿ) ಮತ್ತು 506 ನಿಯಮದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics