ಹರೀಶ್ ನಯನಿ ಮತ್ತು ನಾಯಕ್ ದೀಪ್ ಚಂದ್ 
ದೇಶ

ಕಾರ್ಗಿಲ್ ಯುದ್ದದಲ್ಲಿ 2 ಕಾಲು, ಬಲಗೈ ಕಳೆದುಕೊಂಡ ಹೀರೋ ಗೆ ವಿಶೇಷ ಗೌರವ ಸಲ್ಲಿಸಿದ ಇಂಡಿಗೋ ಪೈಲಟ್

ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ನಮ್ಮನ್ನು ರಕ್ಷಿಸಿದ ಸೈನಿಕರೊಬ್ಬರಿಗೆ ಇಂಡಿಗೋ ವಿಮಾನದ ಪೈಲಟ್ ವಿಶೇಷ ಗೌರವ ಸಲ್ಲಿಸಿದ್ದಾರೆ...

ನವದೆಹಲಿ: ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ನಮ್ಮನ್ನು ರಕ್ಷಿಸಿದ ಸೈನಿಕರೊಬ್ಬರಿಗೆ ಇಂಡಿಗೋ ವಿಮಾನದ ಪೈಲಟ್ ವಿಶೇಷ ಗೌರವ ಸಲ್ಲಿಸಿದ್ದಾರೆ.

ನಿವೃತ್ತ ಐಎಎಫ್ ಫೈಲಟ್ ಹಾಗೂ ಸದ್ಯ ಇಂಡಿಗೋ ಪೈಲಟ್ ಆಗಿ ಕೆಲಸ ಮಾಡುತ್ತಿರುವ ಹರೀಶ್ ನಯನಿ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಸೈನಿಕರೊಬ್ಬರು ವಿಮಾನ ಹತ್ತಿದ ತಕ್ಷಣವೇ ಅವರನ್ನು  ಕರೆದುಕೊಂಡು ಬಂದು ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರಿಗೂ ಪರಿಚಯಿಸಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ತನ್ನ ಎರಡು ಕಾಲು ಹಾಗೂ ಬಲಗೈ ಕಳೆದುಕೊಂಡಿರುವ ನಾಯಕ್ ದೀಪ್ ಚಂದ್ ಬಗ್ಗೆ ಹರೀಶ್ ನಯನಿ  ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಹೃದಯತುಂಬಿ ಹೆಮ್ಮೆಯ ಸೈನಿಕನಿಗೆ ಚಪ್ಪಾಳೆ ತಟ್ಟಿದ್ದಾರೆ.

ಈ ಒಂದು ಸಂದರ್ಭವನ್ನು ಮತ್ತೊಬ್ಬ ನಿವೃತ್ತ ಐಎಎಫ್ ಪೈಲಟ್ ರಾಜೀವ್ ತ್ಯಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಹರೀಶ್ ನಯನಿ ಮತ್ತು ನಾಯಕ್ ದೀಪ್ ಚಂದ್ ಇಬ್ಬರಿಗೂ ಸೆಲ್ಯೂಟ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ