ನವದೆಹಲಿ: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರ ಬಹಿರಂಗಪಡಿಸುವಂತೆ ಆಗ್ರಹಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಈಗ ಮೋದಿ ಡಿಗ್ರೀ ವಿವಾದದ ತಂಟೆಗೆ ಹೋಗಬೇಡಿ ಎಂದು ಕೆಲವು ಮಾಧ್ಯಮಗಳಿಗೆ ಬಿಜೆಪಿ ಸೂಚಿಸಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ದೆಹಲಿ ಸಿಎಂ, ಕೆಲವು ಸುದ್ದಿ ವಾಹಿನಿಗಳ ಹಾಗೂ ಅವುಗಳ ಮುಖ್ಯಸ್ಥರ ಹೆಸರು ಸಹ ಹೇಳಿದ್ದಾರೆ.
ಪ್ರಧಾನಿಯ ಪದವಿ ವಿವಾದದ ಬಗ್ಗೆ ವರದಿ ಮಾಡದಂತೆ ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ವರದಿಗಾರರಿಗೆ ಸೂಚಿಸಿವೆ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ಬುಧವಾರ ದೆಹಲಿ ವಿಶ್ವವಿದ್ಯಾಲಯ ಪ್ರಧಾನಿ ನರೇಂದ್ರ ಮೋದಿ ಅವರ ಬಿಎ ಪದವಿಯ ವಿವರ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಎಎಪಿ ನಾಯಕರು, ಈ ಸಂಬಂಧ ಪ್ರಧಾನಿ ಕಚೇರಿಯಲ್ಲಿ ವಿಚಾರಿಸುವಂತೆ ಸೂಚಿಸಿರುವುದಾಗಿ ಹೇಳಿದ್ದರು.