ದೇಶ

ಮಿಗ್ 21 ವಿಮಾನದಲ್ಲಿ ಹಾರಾಡಲು ಮಹಿಳೆಯರಿಗೆ ಭಯ: ಬಿಜೆಪಿ ಸಂಸದನ ಮಾತಿಗೆ ಸ್ಪೀಕರ್ ಗರಂ

Sumana Upadhyaya

ನವದೆಹಲಿ: ಹೆಚ್ಚಿನ ಅಪಘಾತ ಸಂಭವಿಸುವುದರಿಂದ ಮಿಗ್-21 ಕದನ ವಿಮಾನದಲ್ಲಿ ಹಾರಾಟ ನಡೆಸಲು ಮಹಿಳೆಯರು ಭಯಪಡುತ್ತಾರೆ ಎಂದು ಲೋಕಸಭೆಯಲ್ಲಿ ಹೇಳಿದ ಬಿಜೆಪಿ ಮುಖ್ಯಸ್ಥ ಅರ್ಜುನ್ ರಾಮ್ ಮೇಘವಲ್ ಲೋಕಸಭಾಧ್ಯಕ್ಷರ ಸಿಟ್ಟನ್ನು ಎದುರಿಸಬೇಕಾದ ಪರಿಸ್ಥಿತಿ ನಡೆಯಿತು.

ಭಾರತೀಯ ವಾಯು ಸೇನೆಯ ಯುದ್ಧ ವಿಭಾಗದಲ್ಲಿ ಮಹಿಳೆಯರನ್ನು ಸೇರ್ಪಡೆ ಮಾಡುವ ಕುರಿತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರ ಹೇಳಿಕೆಗೆ ಪೂರಕವಾಗಿ ಮಾತನಾಡಿದ ಮೇಘವಾಲ್, ಹೆಚ್ಚಿನ ಅಪಘಾತ ಸಂಭವಿಸುವುದರಿಂದ ಮಹಿಳೆಯರು ಮಿಗ್-21 ವಿಮಾನದಲ್ಲಿ ಹಾರಾಟ ನಡೆಸಲು ಹೆದರುತ್ತಾರೆ ಎಂದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಹಾಗನ್ನಬೇಡಿ ಎಂದರು. ನಂತರ ರಕ್ಷಣಾ ಸಚಿವರೆಡೆಗೆ ತಿರುಗಿ, ಈ ಮಾತನ್ನು ನೀವು ಒಪ್ಪುತ್ತೀರ ಎಂದು ಕೇಳಿದರು. ಆಗ ಪರ್ರಿಕರ್ ಮೇಘವಾಲ್ ಹೇಳಿಕೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದರು.
ಆಗ ತಮ್ಮ ಹೇಳಿಕೆಯನ್ನು ವಿವರಿಸಲು ಯತ್ನಿಸಿದ ಮೇಘವಾಲ್, ವಿಮಾನದಲ್ಲಿ ಹಾರಾಡುವಾಗ ಆಗುವ ಭಯವನ್ನು ಶಾಲಾ ಮಟ್ಟದಲ್ಲಿಯೇ ಎನ್ ಸಿಸಿ, ಶಿಬಿರ ಮೊದಲಾದವುಗಳ ಮೂಲಕ ಮಕ್ಕಳಿಗೆ ತಿಳಿ ಹೇಳಬೇಕು.

ಈ ವೇಳೆ ಪ್ರತಿಕ್ರಿಯಿಸಿದ ಪರ್ರಿಕರ್, ಮಿಗ್-21 ಒಂದೇ ಎಂಜಿನ್ ನ ಫೈಟರ್ ಜೆಟ್ ಆಗಿದ್ದು, ಯಂತ್ರದಲ್ಲಿ ಏನೇ ಸಮಸ್ಯೆ ಎದುರಾದರೂ ಕೂಡ ಪೈಲಟ್ ಅದನ್ನು ನಿವಾರಿಸಬೇಕು.
ವಿಮಾನಗಳ ನಿರ್ವಹಣೆಯನ್ನು ಸುಧಾರಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಕಳೆದ ದಶಕದಲ್ಲಿ ಭಾರತದಲ್ಲಿ ವಿಮಾನ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಸಚಿವ ಮನೋಹರ್ ಪರ್ರಿಕರ್ ತಿಳಿಸಿದರು.

SCROLL FOR NEXT