ನವದೆಹಲಿ: ಎರಡು ದಿನಗಳ ಹಿಂದಷ್ಟೆ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದ ಮುಂಬೈನ ವಿಶ್ವ ಗಾಯತ್ರಿ ಪರಿವಾರ ಸಂಘಟನೆಯ ಮುಖ್ಯಸ್ಥ ಪ್ರಣವ್ ಪಾಂಡ್ಯ ಅವರು ಸದಸ್ಯತ್ವವನ್ನು ತಿರಸ್ಕರಿಸಿದ್ದಾರೆ.
ಸರ್ಕಾರದ ಶಿಫಾರಸಿನ ಮೇಲೆ ಮೇ 4 ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಣವ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ನಂತರ ತಮ್ಮ ಶಾಂತಿಕುಂಜ್ ಕಾರ್ಯಕಾರಿ ಮಂಡಳಿ ಸದಸ್ಯರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ, ನನ್ನ ನಿರ್ಧಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿರುವ ಅವರು ನಾನು ರಾಜ್ಯಸಭೆ ಸದಸ್ಯತ್ವದ ರೇಸ್ ನಲ್ಲಿ ಇರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಗಾಯತ್ರಿ ಪರಿವಾರ ಸುಮಾರು 12 ಕೋಟಿ ಸದಸ್ಯರನ್ನು ಹೊಂದಿದೆ. ನಾನು ರಾಜ್ಯ ಸಭೆ ಸದಸ್ಯತ್ವ ಪಡೆಯುವುದು ಅವರ ಮೇಲೆ ಪರಿಣಾಮ ಬೀರಬಹುದು. ನಾನು ಯಾವುತ್ತೂ ರಾಜ್ಯಸಭೆ ಸದಸ್ಯನಾಗಬೇಕು ಎಂದು ಬಯಸಿರಲಿಲ್ಲ ಎಂದು ಪ್ರಣವ್ ಪಾಂಡ್ಯ ಹೇಳಿದ್ದಾರೆ.