ಸಾಂದರ್ಭಿಕ ಚಿತ್ರ 
ದೇಶ

ರಾಜಕಾರಣಿಯ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕೆ ಯುವಕನನ್ನು ಗುಂಡಿಕ್ಕಿ ಕೊಂದರು!

ಜನತಾದಳ (ಸಂಯುಕ್ತ) ರಾಜಕಾರಣಿಯ ಮಗ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ...

ಗಯಾ: ಜನತಾದಳ (ಸಂಯುಕ್ತ) ರಾಜಕಾರಣಿಯ ಮಗ ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಿಹಾರದ ಖ್ಯಾತ ಉದ್ಯಮಿಯೊಬ್ಬರ 19ರ ಹರೆಯದ ಮಗ ಆದಿತ್ಯ ಸಚ್‌ದೇವ ಗುಂಡಿಗೆ ಬಲಿಯಾದ ದುರ್ದೈವಿ. ಈಗಷ್ಟೇ 12 ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಆದಿತ್ಯ, ತನ್ನ ಗೆಳೆಯರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಜೆಡಿಯು ನಾಯಕಿ ಮನೋರಮಾ ದೇವಿ ಅವರಿಗೆ ಸೇರಿದ ರೇಂಜ್ ರೋವರ್‌ನ್ನು ಆದಿತ್ಯನ ಕಾರು ಓವರ್‌ಟೇಕ್ ಮಾಡಿತ್ತು. ಮನೋರಮಾ ದೇವಿ ಅವರು ಬಿಹಾರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು,ಅವರ ಪತಿ ಬಿಂದಿ ಯಾದವ್ ಕುಖ್ಯಾತ ಗೂಂಡಾ ಆಗಿದ್ದಾನೆ.
ಓವರ್‌ಟೇಕ್ ಮಾಡಿದ ಕೂಡಲೇ ಕಾರಿನಲ್ಲಿದ್ದ ಮನೋರಮಾ ದೇವಿ ಅವರ ಪುತ್ರ ರೋಕಿ ಮತ್ತು ಆತನ ಬಾಡಿಗಾರ್ಡ್  ನಮ್ಮ ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ನಾವು ಬೋದ್‌ಗಯಾದಿಂದ ಮರಳುತ್ತಿದ್ದ ವೇಳೆ ಈ ಘಟನೆ  ನಡೆದಿತ್ತು. ಗುಂಡಿನ ದಾಳಿ ನಡೆದ ಕೂಡಲೇ ನಾವು ಕಾರು ನಿಲ್ಲಿಸಿದೆವು. ಅವರು ನಮ್ಮನ್ನು ಕಾರಿನಿಂದ ಬಲವಂತವಾಗಿ ಹೊರಗೆಳೆದರು. ನಾವು ಅಲ್ಲಿಂದ ಹೊರಡಲನುವಾದಾಗ ಯಾರೋ ಒಬ್ಬರು ಗುಂಡು ಹಾರಿಸಿದರು ಅದು ನನ್ನ ಗೆಳೆಯನಿಗೆ ತಾಗಿತು. ಆ ಕಾರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಇದ್ದದ್ದನ್ನು ನಾನು ನೋಡಿದೆ ಎಂದು ಆದಿತ್ಯನ ಗೆಳೆಯ ಆಯುಷ್ ಹೇಳಿದ್ದಾನೆ. 
ಪೊಲೀಸರು ಬಾಡಿಗಾರ್ಡ್ ರಾಜೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು,  ರೋಕಿ ತಲೆ ಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ