ದೇಶ

ಅಮ್ಮಂದಿರ ದಿನದಂದು ಸಚಿವೆ ಸ್ಮೃತಿ ಇರಾನಿಗೆ ಕನ್ಹಯ್ಯ ಕುಮಾರ್ ಬಹಿರಂಗ ಪತ್ರ

Shilpa D

ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಮ್ಮಂದಿರ ದಿನವಾದ ಭಾನುವಾರದಂದು ಕೇಂದ್ರ ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪಕ್ಷಪಾತದಿಂದ ಕೂಡಿದ ತನಿಖಾ ವರದಿ ಹಾಗೂ ತಿರುಚಲ್ಪಟ್ಟ ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ತಾಯಿಯಾದವಳು ಹೇಗೆ ಮಕ್ಕಳನ್ನು ಶಿಕ್ಷಿಸುತ್ತಾಳೆ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಫೆಬ್ರವರಿ 9 ರಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದರೆಂಬ ಆರೋಪದಲ್ಲಿ ವಿವಿ ನಡೆಸಿದ ತನಿಖಾ ವರದಿಯನ್ನು ತಾಯಿಯಾದವರು ನಂಬಿದ್ದಾರೆ. ವಿದ್ಯಾರ್ಥಿಗಳನ್ನು ತನ್ನ ಮಕ್ಕಳೆಂದು ಕರೆಯುವ ನೀವು ಸುಳ್ಳು ವರದಿಯನ್ನು ಹೇಗೆ ನಂಬಿದಿರಿ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ನೀವು ತೋರುವ ತಾಯಿ ಪ್ರೀತಿಯಲ್ಲಿ ನಾವು ಕಷ್ಟ ಪಟ್ಟು ಅಧ್ಯಯನ ನಡೆಸಲು ಪ್ರಯತ್ನಿಸುತ್ತೇವೆ, ಆದರೆ ನಿಮ್ಮ ಆಳ್ವಿಕೆಯಲ್ಲಿ  ಹಸಿವು ಮತ್ತು ಪೊಲೀಸರಿಂದ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ವಿಚಾರವಾದಿಗಳ ವಿರೋಧಿ ಸ್ಮೃತಿ ಇರಾನಿ ಅವರಿಗೆ ಮದರ್ಸ್ ಡೇ ಶುಭಾಶಯಗಳು ಎಂದು ಪತ್ರದಲ್ಲಿ ಟೀಕಿಸಿದ್ದಾರೆ. ಸ್ಮೃತಿ ಇರಾನಿ ಅವರಂಥ ತಾಯಿ ಇರಬೇಕಾದರೇ ರೋಹಿತ್ ವೇಮುಲ ಹೇಗೆ ಆತ್ನಹತ್ಯೆ ಮಾಡಿಕೊಂಡ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದು ಬರೆದಿದ್ದಾರೆ.

ಭಾರತದಂತ ದೊಡ್ಡ ರಾಷ್ಟ್ರದಲ್ಲಿ ಯಾವ ತಾಯಿಯಾದರೂ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುತ್ತಾಳಾ ಎಂದು ಪ್ರಶ್ನಿಸಿರುವ ಕನ್ಹಯ್ಯ ಕುಮಾರ್, ತಿರುಚಲ್ಪಟ್ಟ ವಿಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಯಾವ ತಾಯಿಯೂ ತನ್ನ ಮಕ್ಕಳಿಗೆ ಶಿಕ್ಷೆ ನೀಡುವುದಿಲ್ಲ ಎಂದು ಕನ್ಹಯ್ಯ ಕುಮಾರ್ ತಿಳಿಸಿದ್ದಾರೆ.

ನಿಮಗೆ ಸಮಯ ಸಿಕ್ಕರೇ ದಯವಿಟ್ಟು ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಎಂದು ಕನ್ಹಯ್ಯ ಕುಮಾರ್ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ

SCROLL FOR NEXT