ನವದೆಹಲಿ: ಭವಿಷ್ಯ ನಿಧಿ ಖಾತೆಗಳಲ್ಲಿ ರು. 43 ಸಾವಿರ ಕೋಟಿ ಹಣ ನಿಷ್ಕ್ರಿಯ ಉಳಿದ್ದಿದ್ದು, ಆ ಹಣಕ್ಕೆ ಬಡ್ಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಬಂಡಾರು ದತ್ತಾತ್ತ್ರೇಯ ಅವರು ಲೋಕಸಭೆಯ ಪ್ರಶ್ನಾವಳಿ ಸುತ್ತಿನಲ್ಲಿ ಈ ವಿಷಯವನ್ನು ಹೇಳಿದ್ದಾರೆ.
ಇಪಿಎಫ್ ಖಾತೆಗಳಲ್ಲಿ ಸುಮಾರು ರು. 43 ಸಾವಿರ ಕೋಟಿ ಹಣವು ನಿಷ್ಕ್ರಿಯವಾಗಿ ಉಳಿದಿದೆ. ಅಲ್ಲದೇ, 2015–16ರಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಮೂಲಕ 1.18 ಕೋಟಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಶೇಕಡ 98ರಷ್ಟು ಪ್ರಕರಣಗಳನ್ನು ಅರ್ಜಿ ಸಲ್ಲಿಸಿದ 20 ದಿನಗಳಲ್ಲಿಯೇ ಮುಕ್ತಾಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.