ದೆಹಲಿ: ಹೂಡಿಕೆದಾರರಿಗೆ ವಂಚಿಸಿದ ಆರೋಪದ ಜೈಲು ಪಾಲಾಗಿದ್ದ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪೆರೋಲ್ ಅವಧಿಯನ್ನು ಸುಪ್ರೀಂ ಕೋರ್ಟ್ ಜುಲೈ 11ರವರೆಗೆ ವಿಸ್ತರಿಸಿದೆ.
ತಾಯಿ ನಿಧನದ ಹಿನ್ನಲೆಯಲ್ಲಿ ಈಗಾಗಲೇ ಒಂದು ತಿಂಗಳ ಅವಧಿಗೆ ಪೆರೋಲ್ ಪಡೆದಿರುವ ಸುಬ್ರತಾರಾಯ್ ಗೆ ಜುಲೈ 11ರೊಳಗೆ ಸೆಬಿಗೆ 200 ಕೋಟಿ ರು.ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಒಂದು ವೇಳೆ ಪಾವತಿಸದಿದ್ದರೆ ಪೆರೋಲ್ ಹಿಂಪಡೆಯಲಾಗುವುದು ಎಂದು ಎಚ್ಚರಿಸಿದೆ.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ದುರುಪಯೋಗ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರತಾ ರಾಯ್ ವಿರುದ್ಧ ಸುಪ್ರೀಂ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ, ಬಂಧನಕ್ಕೆ ಆದೇಶಿಸಿತ್ತು. ಇದಾದ ಬಳಿಕ 2 ದಿನಗಳಿಂದ ತಲೆ ಮರೆಸಿಕೊಂಡಿದ್ದ 65 ವರ್ಷ ವಯಸ್ಸಿನ ಸುಬ್ರತಾ ರಾಯ್ ಬಳಿಕ ಲಕ್ನೋ ಪೊಲೀಸರ ಎದುರು ಶರಣಾಗಿ ಜೈಲುಪಾಲಾಗಿದ್ದರು.