ವಿದ್ಯಾರ್ಥಿಗಳಿಂದ ಶಿಕ್ಷಕರ ಮೌಲ್ಯ ಮಾಪನ (ಸಂಗ್ರಹ ಚಿತ್ರ) 
ದೇಶ

ಈಗ ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡಬಹುದು!

ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದ್ದು, ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡುವ ಅವಕಾಶವನ್ನು ನೀಡಲು ಮುಂದಾಗಿದೆ.

ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮುಂದಾಗಿದ್ದು, ವಿದ್ಯಾರ್ಥಿಗಳೇ ತಮ್ಮ ಶಿಕ್ಷಕರ ಮೌಲ್ಯಮಾಪನ ಮಾಡುವ ಅವಕಾಶವನ್ನು ನೀಡಲು ಚಿಂತಿಸಿದೆ.

ಶೈಕ್ಷಣಿಕ ಸಾಧನಾ ಸೂಚಕ (ಎಪಿಐ) ಮಾನದಂಡದಲ್ಲಿ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಎಪಿಐಗೆ ವಿದ್ಯಾರ್ಥಿಗಳ ಶಿಕ್ಷಕರ  ಮೌಲ್ಯಮಾಪನ ಪ್ರಕ್ರಿಯೆಯನ್ನು ಸೇರಿಸಲು ನಿರ್ಧರಿಸಿದೆ. ಪ್ರಸ್ತುತ ಶಿಕ್ಷಕರ ಶೈಕ್ಷಣಿಕ ಸಾಧನಾ ಸೂಚಕದಲ್ಲಿ ಪಠ್ಯೇತರ ಚಟುವಟಿಗಳು ಮತ್ತು ಸಂಶೋಧನಾ ಪ್ರಕ್ರಿಯೆಗಳು  ಮಾನದಂಡವಾಗಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಶಿಕ್ಷಕರ ಮೌಲ್ಯಮಾಪನವನ್ನು ಕೂಡ ಸೇರಿಸಲು ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.

ಮಾನವ ಸಂಪನ್ಮೂಲ ಇಲಾಖೆಯ ನೂತನ ಕಾನೂನಿನ ಅನ್ವಯ ಶೇ.75ರಷ್ಟು ಹಾಜರಾತಿ ಇರುವ ವಿದ್ಯಾರ್ಥಿಗಳು ತಮ್ಮ-ತಮ್ಮ ಶಿಕ್ಷಕರನ್ನು ಮೌಲ್ಯಮಾಪನ ಮಾಡಿ, ಶಿಕ್ಷಕರ ಕುರಿತಂತೆ  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ. ಇದರಿಂದ ಶಿಕ್ಷಕರು ತಮ್ಮ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ತನ್ನ ಈ  ನಿರ್ಧಾರಕ್ಕೆ ಕಾರಣವನ್ನೂ ಸ್ಪಷ್ಟಪಡಿಸಿರುವ ಮಾನವ ಸಂಪನ್ಮೂಲ ಇಲಾಖೆ, ಈ ಹಿಂದೆ ಎರಡು ವಿಭಾಗದಲ್ಲಿ ಎಪಿಐ ಅಂಕಗಳನ್ನು ನೀಡಲಾಗುತ್ತಿತ್ತು. ಅದರಂತೆ ಶೇ.30ರಷ್ಟು ಅಂಕ ಪಠ್ಯೇತರ ಚಟುವಟಿಕೆಗಳದ್ದಾದರೆ, ಮತ್ತೆ ಶೇ.30ರಷ್ಟು ಅಂಕ ಸಂಶೋಧನಾ ಪ್ರಕ್ರಿಯೆ ಮೇಲೆ ಆಧಾರವಾಗಿರುತ್ತಿತ್ತು.

2010ರಲ್ಲಿ ಜಾರಿಯಾದ ಈ ನಿಯಮವನ್ನು ಸಾಕಷ್ಟು ಶಿಕ್ಷಕರ ಸಂಘಗಳು ವಿರೋಧಿಸಿದ್ದವು. ಅಲ್ಲದೆ ಸರ್ಕಾರದ ಈ ಕ್ರಮ ನ್ಯಾಯಸಮ್ಮತವಾಗಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದವು. ಹೀಗಾಗಿ ಈ ನೂತನ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಶೈಕ್ಷಣಿಕ ಸಾಧನಾ ಸೂಚಕ (ಎಪಿಐ)ನ ಆಧಾರದ ಮೇಲೆ ಶಿಕ್ಷಕರ ಮೌಲ್ಯಮಾಪನ ಮಾಡುವ ಸರ್ಕಾರ, ಅವರ ಭಡ್ತಿ, ಭತ್ಯೆ ಇತ್ಯಾದಿ ಅಂಶಗಳನ್ನು ಈ ಎಪಿಐ ಮಾನದಂಡದ ಮೇಲೆ  ನಿರ್ಧರಿಸುತ್ತದೆ. ಹೀಗಾಗಿ 2010ರಲ್ಲಿ ಜಾರಿಯಾಗಿದ್ದ ಕೇಂದ್ರ ಸರ್ಕಾರದ ನಿಯಮವನ್ನು ಸಾಕಷ್ಟು ಸರ್ಕಾರಿ ಶಿಕ್ಷಕರು ವಿರೋಧಿಸಿದ್ದರು. ಇದೀಗ ಸಚಿವೆ ಸ್ಮೃತಿ ಇರಾನಿ ನೇತೃತ್ವದ ಮಾನವ  ಸಂಪನ್ಮೂಲ ಇಲಾಖೆ ತನ್ನ ನಿಯಮಕ್ಕೆ ತಿದ್ದುಪಡಿ ತಂದು ಹೊಸ ಮಾನದಂಡವನ್ನು ಅದಕ್ಕೆ ಸೇರಿಸಿದೆ. ಅದರಂತೆ ಇನ್ನು ಮುಂದೆ ಶಿಕ್ಷಕರ ಭಡ್ತಿ ಮತ್ತು ಭತ್ಯೆ ಹೆಚ್ಚಳದ ವಿಚಾರದಲ್ಲಿ ವಿದ್ಯಾರ್ಥಿಗಳ ಮೌಲ್ಯಮಾಪನ ಕೂಡ ಗಣನೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT