ಸುಬ್ರತಾ ರಾಯ್ 
ದೇಶ

ಸುಬ್ರತಾ ರಾಯ್‌ ಬೃಹತ್‌ ಆಸ್ತಿ ವಿವರ ನೋಡಿ ದಂಗಾದ ಸುಪ್ರೀಂ ಕೋರ್ಟ್‌

ತಾಯಿ ನಿಧನದ ಹಿನ್ನೆಲೆಯಲ್ಲಿ ಈಗ ಪೆರೋಲ್ ಮೇಲೆ ಬಿಡುಗಡೆಯಾಗಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್‌ ಅವರ ಆಸ್ತಿ ಪಾಸ್ತಿಗಳ ವಿವರ ನೋಡಿ...

ನವದೆಹಲಿ: ತಾಯಿ ನಿಧನದ ಹಿನ್ನೆಲೆಯಲ್ಲಿ ಈಗ ಪೆರೋಲ್ ಮೇಲೆ ಬಿಡುಗಡೆಯಾಗಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್‌ ಅವರ ಆಸ್ತಿ ಪಾಸ್ತಿಗಳ ವಿವರ ನೋಡಿ ಗುರುವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೇ ದಂಗಾಗಿ ಹೋಗಿದ್ದಾರೆ.
ರಾಯ್‌ ಅವರು 36,000 ಕೋಟಿ ರುಪಾಯಿ ಪಾವತಿಸಬೇಕಿದೆ. ಆದರೆ ಅವರ ವೈಯಕ್ತಿಕ ಆಸ್ತಿ ಪಾಸ್ತಿಗಳು ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿದೆ. ಇಷ್ಟೊಂದು ಶ್ರೀಮಂತ ವ್ಯಕ್ತಿಗೆ ತನ್ನ ಸಾಲಗಳನ್ನು ತೀರಿಸುವುದಕ್ಕೆ ಯಾವ ಕೊರತೆಯೂ ಇಲ್ಲ; ಹಾಗಿದ್ದರೂ ಈ ಮನುಷ್ಯ ಕಳೆದ ಎರಡು ವರ್ಷಗಳಿಂದ ಜೈಲುವಾಸವನ್ನು ಯಾಕಾಗಿ ಅನುಭವಿಸುತ್ತಿದ್ದಾರೆ? ಅವರೇಕೆ ತಮ್ಮ ಬಾಧ್ಯತೆಗಳನ್ನು ತೀರಿಸಿ ಜೈಲಿನಿಂದ ಮುಕ್ತರಾಗಲು ಬಯಸುವುದಿಲ್ಲ ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.
ಸುಬ್ರತಾ ರಾಯ್‌ ಅವರ ಆಸ್ತಿ, ಪಾಸ್ತಿಗಳ ವಿವರವನ್ನು ಸುಪ್ರೀಂ ಕೋರ್ಟ್ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ರಾಯ್ ಪರ ವಕೀಲ ಕಪಿಲ್‌ ಸಿಬಲ್‌ ಅವರು,  ಸುಬ್ರತಾ ರಾಯ್‌ ಅವರು ಪಾವತಿಸಬೇಕಿರುವ ಮೊತ್ತ ಸುಮಾರು 36,000 ಕೋಟಿ ರು. ಈ ಪೈಕಿ ಅವರು ಈಗಾಗಲೇ 12,000 ಕೋಟಿ ರು.ಗಳನ್ನು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಬಿಯಲ್ಲಿ ಠೇವಣಿ ಇರಿಸಿದ್ದಾರೆ. ಅವರನ್ನು ಆರು ತಿಂಗಳ ಮಟ್ಟಿಗೆ ಜೈಲಿನಿಂದ ಬಿಟ್ಟರೆ ಅವರು ತಮ್ಮ ಎಲ್ಲ ಸಾಲವನ್ನು ತೀರಿಸಲಿದ್ದಾರೆ ಎಂದು ಕೋರ್ಟಿಗೆ ತಿಳಿಸಿದರು.
ರಾಯ್‌ ಅವರ ವೈಯಕ್ತಿಕ ಆಸ್ತಿ ಪಾಸ್ತಿಯ ಒಟ್ಟು ಮೌಲ್ಯದ ಸಾಸಿವೆಯಷ್ಟು ಪ್ರಮಾಣ ಮಾತ್ರವೇ ಅವರು ಪಾವತಿಸಬೇಕಾಗಿದೆ. ಅದನ್ನು ತೀರಿಸಲು ಅವರಿಗೆ ಯಾವ ಕೊರತೆಯೂ ಇಲ್ಲ ಎಂದು ಸಿಬಲ್‌ ಹೇಳಿದಾಗ, ಇಷ್ಟೊಂದು ಸಿರಿವಂತ ಮನುಷ್ಯನಿಗೆ ತನ್ನ ಸಾಲಗಳನ್ನು ತೀರಿಸುವ ಇಚ್ಛೆಯೇ ಇಲ್ಲವೇ? ಅದಕ್ಕಾಗಿ ಅವರು 2 ವರ್ಷಗಳಿಂದ ಜೈಲಿನಲ್ಲೇ ಇರಲು ಬಯಸಿದ್ದಾರೆಯೇ? ಎಂದು ಕೋರ್ಟ್ ಪ್ರಶ್ನಿಸಿತು.
ಇದೇ ವೇಳೆ ಕಪಿಲ್ ಸಿಬಲ್‌ ಅವರು ಸುಬ್ರತಾ ರಾಯ್‌ ಸಹಿ ಹಾಕಿದ 500 ಕೋಟಿ ರು.ಗಳ ಹಾಗೂ 4,500 ಕೋಟಿ ರು.ಗಳ ಚೆಕ್ಕನ್ನು ಕೋರ್ಟಿನ ಮುಂದೆ ಇರಿಸಿ, ನನ್ನ ಕಕ್ಷಿದಾರರು ಯಾವುದೇ ಕಾರಣಕ್ಕೂ ದೇಶದಿಂದ ಪಲಾಯನ ಮಾಡುವುದಿಲ್ಲ; ಇವೆರಡು ಚೆಕ್ಕುಗಳನ್ನು ಸೆಬಿ ಆಗಸ್ಟ್‌ ತಿಂಗಳಲ್ಲಿ ಡ್ರಾ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸುಬ್ರತಾ ರಾಯ್‌ ಅವರ ವೈಯಕ್ತಿಕ ಆಸ್ತಿ ಪಾಸ್ತಿಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಠಾಕೂರ್‌, ನ್ಯಾ. ಎ ಆರ್‌ ದವೆ ಮತ್ತು ನ್ಯಾ ಎ ಕೆ ಸಿಕ್ರಿ ಅವರನ್ನೊಳಗೊಂಡ ಸುಪ್ರೀಂ ಪೀಠ, ಇದರೆದುರು ಅವರಿಗಿರುವ ಸಾಲ ಬಾಧ್ಯತೆಗಳ ಮೊತ್ತ ನಗಣ್ಯವಾಗಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್