ಉಭಯ ಪಕ್ಷಗಳ ಜಾಹಿರಾತಿನಲ್ಲಿ ಒಂದೇ ಅಜ್ಜಿ 
ದೇಶ

ಉಭಯ ಪಕ್ಷಗಳ ಜಾಹಿರಾತಿನಲ್ಲಿ ಒಂದೇ ಅಜ್ಜಿ: ಡಿಎಂಕೆ, ಎಐಎಡಿಎಂಕೆ ಕಕ್ಕಾಬಿಕ್ಕಿ!

ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಜಾಹಿರಾತು ವಿಷಯದಲ್ಲಿ ಎಡವಟ್ಟು ನಡೆದಿವೆ.

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ರಾಜಕೀಯ ಪ್ರಚಾರ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಜಾಹಿರಾತು ಮೂಲಕ ಪ್ರಚಾರ ಪ್ರಾರಂಭಿಸಿವೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಜಾಹಿರಾತು ವಿಷಯದಲ್ಲಿ ಎಡವಟ್ಟು ನಡೆದಿದ್ದು ಎರಡು ಪಕ್ಷಗಳ ಜಾಹಿರಾತಿನಲ್ಲೂ ಒಬ್ಬರೇ ವೃದ್ಧೆ ಕಾಣಿಸಿಕೊಂಡಿದ್ದಾರೆ.
67 ವೃದ್ಧೆ ಕಸ್ತೂರಿ ಪಾಟಿ ಡಿಎಂಕೆ ಹಾಗೂ ಎಐಎಡಿಎಂಕೆ ಎರಡೂ ಪಕ್ಷಗಳ ಪರವೂ ಪ್ರಚಾರ ಮಾಡಿದ್ದು, ದೇವಾಲಯಗಳಲ್ಲಿ ಉಚಿತ ಊಟ ನಿಡುವ ಸಿಎಂ ಜಯಲಿತಾ ಅವರ ಅಮ್ಮಾ ಅನ್ನದಾನಂ ಯೋಜನೆಯನ್ನು ಎಐಎಡಿಎಂಕೆ  ಜಾಹಿರಾತಿನ ವಿಡಿಯೋದಲ್ಲಿ ಕೊಂಡಾಡಿದ್ದಾರೆ.  ಡಿಎಂಕೆ ಜಾಹಿರಾತಿನಲ್ಲೂ ನಟಿಸಿದ್ದು, ತಮಿಳುನಾಡು ಸಿಎಂ ಜಯಲಲಿತಾ ಅವರು ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸುವುದನ್ನು ಟೀಕಿಸಿದ್ದು ಬಡವರ ಬಗ್ಗೆ ಜಯಲಲಿತಾ ಸರ್ಕಾರ ಕಾಳಜಿ ಹೊಂದಿಲ್ಲ, ಬಡವರ ಅಗತ್ಯತೆಗಳನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಎರಡೂ ಪಕ್ಷಗಳ ಪರ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾಧ್ಯಮದವ ಪ್ರಶ್ನೆಗೆ ಉತ್ತರಿಸಿರುವ ವೃದ್ಧೆ, ತಾನು ಇಬ್ಬರು ವಿರೋಧಿಗಳ ಜಾಹಿರಾತಿನಲ್ಲಿ ನಟಿಸುತ್ತಿದ್ದೇನೆ ಎಂಬುದು ತಿಳಿದೇ ಇರಲಿಲ್ಲ ಎಂದು ಹೇಳಿದ್ದಾರೆ. ಕಿರು ಚಿತ್ರ ನಿರ್ಮಿಸುತ್ತಿದ್ದು ಇದಕ್ಕಾಗಿ ನಟಿಸಬೇಕು ಎಂದಷ್ಟೇ ಹೇಳಲಾಗಿತ್ತು. ನಂತರ ಡಿಎಂಕೆ ಅವರೂ ಇದೇ ಪ್ರಸ್ತಾಪ ಮುಂದಿಟ್ಟರು, ಆದರೆ ಈಗಾಗಲೇ ಅಮ್ಮಾ ಕ್ಯಾಂಟೀನ್ ಬಗ್ಗೆ ಚಿತ್ರೀಕರಣ ಮಾಡಿರುವುದಾಗಿ ಹೇಳಿದರೂ ಡಿಎಂಕೆ ಜಾಹಿರಾತಿನಲ್ಲಿ ನಟಿಸುವಂತೆ ಒತ್ತಾಯ ಮಾಡಲಾಯಿತು, ಇದಕ್ಕಾಗಿ ಎಐಎಡಿಎಂಕೆ ಯಿಂದ 1 ,500 ರೂಪಾಯಿಗಳನ್ನು ಡಿಎಂಕೆ ಯಿಂದ 1000 ರೂಪಾಯಿಗಳನ್ನು ಪಡೆದಿರುವುದಾಗಿ ವೃದ್ಧೆ ತಿಳಿಸಿದ್ದಾರೆ.
ಈ ಎಡವಟ್ಟಿನಿಂದ ಕಕ್ಕಾಬಿಕ್ಕಿಯಾಗಿರುವ ಉಭಯ ಪಕ್ಷಗಳ ವಕ್ತಾರರು, ಜಾಹಿರಾತಿನ ಏಜೆಂಟ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ವೃದ್ಧೆ ಕಾಣಿಸಿಕೊಂಡಿರುವ ಎರಡೂ ಜಾಹಿರಾತುಗಳನ್ನು ಮಾತ್ರ ಕೈಬಿಡಲಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT