ದೇಶ

ಬಾಲಕಿಗೆ ಲೈಂಗಿಕ ಕಿರುಕುಳ: ಸ್ಕೂಲ್ ವ್ಯಾನ್ ಡ್ರೈವರ್ ಬಂಧನ

Mainashree
ಜೇಮ್ ಶೆಡ್ ಪುರ್: ಶಾಲಾ ವಾಹನ ಚಾಲಕ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಇಲ್ಲಿನ ಸಿಂಗ್ ಬುಮ್ ನಲ್ಲಿ ನಡೆದಿದೆ. 
ಜೇಮ್ ಶೆಡ್ ಪುರದಲ್ಲಿರುವ ಸೋನಾರಿ ಎಂಬಲ್ಲಿ ಆಂಗ್ಲ ಮಾಧ್ಯಮದಲ್ಲಿ ಐದನೇ ತರಗತಿ ವ್ಯಾಂಸಗ ಮಾಡುತ್ತಿದ್ದ ಬಾಲಕಿಗೆ ಸ್ಕೂಲ್ ವ್ಯಾನ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ. 
ಬಾಲಕಿ ಅನಾರೋಗ್ಯಕ್ಕೆ ಒಳಗಾಗಿದ್ದು, ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚಾಲಕ ಸುರೇಶ್ ರಜಾಕ್ ನನ್ನು ಬಂಧಿಸಲಾಗಿದೆ. 
ಕಳೆದ ಅಕ್ಟೋಬರ್ ತಿಂಗಳಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT