ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ
ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮಂಗಳವಾರ ಜೂನ್ 6ರವರೆಗೆ ವಿಸ್ತರಿಸಿದೆ.
ಇಂದು ಬೆಳಗ್ಗೆ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವ ಪ್ರಕರಣ ನಾಲ್ಕನೆ ಆರೋಪಿ, ಇಂದ್ರಾಣಿ ಮುಖರ್ಜಿ ಚಾಲಕ ಶಾಮವರ್ ರಾಯ್ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಸಿಬಿಐ ಕಾಲವಕಾಶ ಕೇಳಿದೆ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ, ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ.
ಮೇ 11ರಂದು ಸಿಬಿಐ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದ ಶ್ಯಾಮವರ ರಾಯ್ "ನಾನು ಮಾಫಿ ಸಾಕ್ಷಿಯಾಗಲು ಬಯಸಿದ್ದೇನೆ. ಎಲ್ಲ ಸತ್ಯವನ್ನೂ ನಾನು ಬಹಿರಂಗಪಡಿಸಲಿದ್ದೇನೆ' ಎಂದಿದ್ದ.
ಕೊಲೆಯಲ್ಲಿ ನಾನು ಭಾಗಿಯಾಗಿದ್ದೇನೆ. ಘಟನೆ ನಡೆದಾಗ ನಾನು ಸ್ಥಳದಲ್ಲೇ ಇದ್ದೆ. ಶೀನಾಳ ಕುತ್ತಿಗೆಗೆ ಉರುಳು ಬಿಗಿದು ಸಾಯಿಸಲಾಯಿತು ಎಂದು ಹೇಳಿದ್ದ ರಾಯ್, ತನ್ನನ್ನು ಕ್ಷಮಿಸಬೇಕೆಂದು 2 ಪುಟದ ಪತ್ರವನ್ನು ನ್ಯಾಯಾಲಯಕ್ಕೆ ನೀಡಿದ್ದ. ಈ ಸಂಬಂಧ ಮೇ 17ಕ್ಕೆ ಪ್ರತಿಕ್ರಿಯಿಸುವಂತೆ ಸಿಬಿಐಗೆ ನ್ಯಾಯಾಲಯ ಸೂಚಿಸಿತು. ಆದರೆ ಆ ಬಗ್ಗೆ ಪ್ರತಿಕ್ರಿಯಿಸಲು ಸಿಬಿಐ ಮತ್ತೆ ಕಾಲವಕಾಶ ಕೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics