ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ವಿಡಿಯೋದಲ್ಲಿ ಪ್ರತ್ಯಕ್ಷ! 
ದೇಶ

ಬಾತ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ವಿಡಿಯೋದಲ್ಲಿ ಪ್ರತ್ಯಕ್ಷ!

2008 ರ ಡಿಸೆಂಬರ್ ನಲ್ಲಿ ನಡೆದಿದ್ದ ಬಾತ್ಲಾ ಹೌಸ್ ಏನ್ ಕೌಂಟರ್ ಪ್ರಕರಣದಲ್ಲಿ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ಬಿಡುಗಡೆ ಮಾಡಿರುವ ಭಾರತೀಯ ಜಿಹಾದಿಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.

ನವದೆಹಲಿ: 2008 ರ ಡಿಸೆಂಬರ್ ನಲ್ಲಿ ನಡೆದಿದ್ದ ಬಾತ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಪೋಲಿಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಇಸೀಸ್ ಬಿಡುಗಡೆ ಮಾಡಿರುವ ಭಾರತೀಯ ಜಿಹಾದಿಗಳ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ.
ಬಾತ್ಲಾ ಎನ್ ಕೌಂಟರ್ ಹೌಸ್ ಪ್ರಕರಣದಲ್ಲಿ ಕೂದಲೆಳೆ ಅಂಚಿನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಉಗ್ರ ಮೊಹಮ್ಮದ್ ಸಾಜಿದ್ ಅಲಿಯಾಸ್ ಬಡಾ ಸಾಜಿದ್ ಇತ್ತೀಚೆಗೆ ಇಸೀಸ್ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ವರದಿ ಪ್ರಕಟವಾಗಿದೆ.
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಆಜಂಘರ್ ಘಟಕದಲ್ಲಿದ್ದ ಸಾಜಿದ್ ನೇಪಾಳದ ಮೂಲಕ ದುಬೈ ಗೆ ಪರಾರಿಯಾಗಿದ್ದ. 10 ತಿಂಗಳ ಹಿಂದೆ ಅಮೆರಿಕ ನಡೆಸಿದ್ದ ದಾಳಿಯಲ್ಲಿ ಸಾಜಿದ್ ಸಾವನ್ನಪ್ಪಿದ್ದಾನೆ ಎಂದು ಭಾರತದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಂಬಿದ್ದರು. ಆದರೆ ಸಾವನ್ನಪ್ಪಿದ್ದ ಉಗ್ರ ಈಗ ಇಸೀಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ವಿಡಿಯೋದಲ್ಲಿ ಈ ಉಗ್ರ ಕಾಣಿಸಿಕೊಂಡಿರುವುದರಿಂದ ಇಸೀಸ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ವಿಡಿಯೋ ಹತ್ತು ತಿಂಗಳ ಹಿಂದೆ ಚಿತ್ರೀಕರಿಸಲಾಗಿರಬಹುದು ಎಂದು ಶಂಕಿಸಲಾಗಿದೆ. ಇನ್ನು ವಿಡಿಯೋದಲ್ಲಿದ್ದ ಉಳಿದ ನಾಲ್ಕು ಭಾರತೀಯರ ಗುರುತನ್ನು ಪತ್ತೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಈ ಪೈಕಿ ಇಬ್ಬರು ಐಎಂ ನ ಆಜಂಘರ್ ಘಟಕದ ಸದಸ್ಯರಾಗಿದ್ದರೆ ಮತ್ತೆ ಇಬ್ಬರು ಕಲ್ಯಾಣ್ ಘಟಕದ ಸದಸ್ಯರು ಎಂದು ಹೇಳಲಾಗಿದೆ.   
ಇಬ್ಬರು ಉಗ್ರರಲ್ಲಿ ಅಬು ರಶೀದ್ ಅಲಿಯಾಸ್ ದಂಡ ಉತ್ತರ ಪ್ರದೇಶದ ಆಜಂಘರ್ ನವನಾಗಿದ್ದರೆ, ಮತ್ತೋರ್ವ ರೆಹಮಾನ್ ಎಂಬ ಉಗ್ರ ಹೈದರಾಬಾದ್ ಮೂಲದವನು ಹಾಗೂ ಫಾಹದ್ ತನ್ವೀರ್ ಎಂಬ ಮತ್ತೊಬ್ಬ ಉಗ್ರ ಮಹಾರಾಷ್ಟ್ರದವನು ಎಂದು ವರದಿ ಮೂಲಕ ತಿಳಿದುಬಂದಿದೆ.  ಭಾರತದ ಜಿಹಾದಿಗಳು ಎಂದು ಹೇಳಲಾಗುವ ಉಗ್ರರು ಸಿರಿಯಾದಲ್ಲಿ ದಾಳಿ ನಡೆಸುತ್ತಿರುವ ವೀಡಿಯೋವನ್ನು ಇತ್ತೀಚೆಗಷ್ಟೇ ಇಸ್ಲಾಮಿಕ್ ಸ್ಟೇಟ್ (ಇಸಿಸ್) ಬಹಿರಂಗ ಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ