ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸುಲಭ್ ಶೌಚಾಲಯಕ್ಕೆ ನನ್ನ ಹೆಸರಿಟ್ಟಿರುವ ಬಗ್ಗೆ ಹೆಮ್ಮೆಯಿದೆ: ರಿಷಿ ಕಪೂರ್

ಅಲಹಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುಲಭ್ ಶೌಚಾಲಯಕ್ಕೆ ಬಾಲಿವುಡ್ ನಟ ರಿಷಿ ಕಪೂರ್ ಅವರ ಹೆಸರಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ರಿಷಿ...

ನಟ ರಿಷಿ ಕಪೂರ್
Rashmi Kasaragodu
Updated On : 25 May 2016, 7:11 am
ಅಲಹಾಬಾದ್: ಅಲಹಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸುಲಭ್ ಶೌಚಾಲಯಕ್ಕೆ ಬಾಲಿವುಡ್ ನಟ ರಿಷಿ ಕಪೂರ್ ಅವರ ಹೆಸರಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ರಿಷಿ, ಈ ಸುದ್ದಿಯನ್ನು ಓದಲು ತಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ರಾಷ್ಟ್ರದ ಪ್ರಮುಖ ಆಸ್ತಿಗಳಿಗೆಲ್ಲಾ ಗಾಂಧಿ ಕುಟುಂಬದ ಹೆಸರಿಡಲು, ಅದೇನು ಅವರಪ್ಪನ ಆಸ್ತಿಯೇ ಎಂದು ಕೇಳಿ ಟ್ವೀಟ್ ಮಾಡಿ ರಿಷಿ ಸುದ್ದಿಗೆ ಗ್ರಾಸವಾಗಿದ್ದರು.
ಗಾಂಧಿ ಕುಟುಂಬದ ವಿರುದ್ಧ ರಿಷಿ ಕಪೂರ್ ಸರಣಿ ಟ್ವೀಟ್ ಮಾಡಿದ್ದಕ್ಕೆ ಕೋಪಗೊಂಡ ಕಾಂಗ್ರೆಸ್ ಕಾರ್ಯಕರ್ತರು ಅಲಹಾಬಾದ್‌ನಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ರಿಷಿ ಕಪೂರ್ ಎಂದು ನಾಮಕರಣ ಮಾಡಿ ಪ್ರತಿಭಟಿಸಿದ್ದರು.

Advertisement

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಿ, ನಾನು ಈ ಬಗ್ಗೆ ಉತ್ಸುಕನಾಗಿದ್ದೇನೆ. ನನ್ನ ಹೆಸರನ್ನು ಹಾಗಾದರೂ ಬಳಸಿದರಲ್ಲ. ಈ ಕಾಂಗ್ರೆಸ್ ಕಾರ್ಯಕರ್ತರು ಯಾವುದಕ್ಕೂ ಯೋಗ್ಯರಲ್ಲ. ಸುಲಭ್ ಶೌಚಾಲಯಕ್ಕೆ ನನ್ನ ಹೆಸರಿಟ್ಟಿರುವ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಯಾಕೆಂದರೆ ಇದು ಈಗ ಪ್ರಧಾನಿಯವರ ಆಪ್ತ ಯೋಜನೆಯಾಗಿದೆ.
ಆದಾಗ್ಯೂ, ನಾನು ನೆಹರು, ಗಾಂಧಿ ಕುಟುಂಬದ ವಿರೋಧಿಯಲ್ಲ, ಆದರೆ ಆ ಕುಟುಂಬದ ಹೆಸರನ್ನು ವ್ಯಾಪಕವಾಗಿ ಬಳಸುವುದರ ಬಗ್ಗೆ ನನ್ನ ವಿರೋಧವಿದೆ ಎಂದು ರಿಷಿ ಕಪೂರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement