ನವದೆಹಲಿ: ಪ್ರತಿಭಟನೆ ನಡೆಸುವುದಕ್ಕೂ ಮುನ್ನು ಮೊದಲು ನಿಮ್ಮ ರಾಜ್ಯಗಳ ಗಮನ ಕೊಡಿ ಎಂದು ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಗೆ ಗುರುವಾರ ಹೇಳಿದೆ.
ರಾಜಧಾನಿ ದೆಹಲಿಯಲ್ಲಿನ ವಿದ್ಯುತ್ ಹಾಗೂ ನೀರಿನ ಸಮಸ್ಯೆ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿರ್ಧರಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಪತ್ರ ಬರೆದಿರುವ ದೆಹಲಿ ಆಪ್ ಸಂಚಾಲಕ ದಿಲೀಪ್ ಪಾಂಡೆ ಅವರು, ರಾಹುಲ್ ಗಾಂಧಿಯವರು ಪ್ರತಿಭಟನೆ ನಡೆಸುವುದಕ್ಕೂ ಮುನ್ನ ತಮ್ಮ ಸ್ವಂತ ರಾಜ್ಯದ ಕಡೆಗೆ ಗಮನ ಹರಿಸಬೇಕೆಂದು ಹೇಳಿದ್ದಾರೆ.
ಪತ್ರದಲ್ಲಿ ದೆಹಲಿ ರಾಜಕೀಯಕ್ಕೆ ರಾಹುಲ್ ರನ್ನು ಸ್ವಾಗತಿಸಿರುವ ಪಾಂಡೆಯವರು, ರ್ಯಾಲಿ ಆರಂಭವಾಗುವುದಕ್ಕೂ ಮುನ್ನ ಈ ಹಿಂದೆ ಇದ್ದ ಸರ್ಕಾರದ ಕುರಿತ ದಾಖಲೆಗಳನ್ನು ರಾಹುಲ್ ಗೆ ನಾನು ನೀಡುತ್ತೇನೆ. ಈ ದಾಖಲೆಗಳು ಮಾಜಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಹಾಗೂ ಅಜಯ್ ಮಕೇನ್ ಅವರು ಖಾಸಗಿ ಕ್ಷೇತ್ರದಲ್ಲಿ ನಡೆಸಿರುವ ಭ್ರಷ್ಟಾಚಾರಗಳನ್ನು ಬಹಿರಂಗ ಪಡಿಸಲಿದೆ. ದೆಹಲಿಯಲ್ಲಿ ಮೋದಿಯವರು ಭ್ರಷ್ಟಾಚಾರ ನಿಗ್ರಹವನ್ನು ತೆಗೆದುಹಾಕಿರಲಿಲ್ಲ ಎಂದಿದ್ದರೆ. ತನಿಖೆಯಲ್ಲಿ ಈ ಸತ್ಯಾಂಶ ಬಹಿರಂಗವಾಗುತ್ತಿತ್ತು. ಇಬ್ಬರನ್ನು ತನಿಖೆಗೊಳಪಡಿಸಬಹುದಿತ್ತು.
ನೀರು ಮತ್ತು ವಿದ್ಯುತ್ ಕುರಿತಂತೆ ಈ ಹಿಂದೆ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪರಿಸ್ಥಿತಿಗಿಂತಲೂ ಇಂದು ಸುಧಾರಿಸಿದೆ. ಇದೀಗ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಲು ಬರುತ್ತಿರುವ ಕಾಂಗ್ರೆಸ್, ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದ ರಾಜ್ಯಗಳಲ್ಲಿ ಇವುಗಳ ಪರಿಸ್ಥಿತಿಯನ್ನು ಸುಧಾರಿಸಲು ಯತ್ನ ನಡೆಸಬೇಕಿತ್ತು. ನಿಮಗೆ ನಿಜಕ್ಕೂ ಸಹಾಯ ಮಾಡುವ ಉದ್ದೇಶವಿದ್ದರೆ, ಮೊದಲು ನಮಗೆ ತಿಳಿಸಿ ಎಂದು ಹೇಳಿದ್ದಾರೆ.
ಇನ್ನು ಮತ್ತೊಂದೆಗೆ ಆಪ್ ಗೆ ರಾಹುಲ್ ಎಂದರೆ ಭಯ ಎಂದು ಹೇಳಲಾಗುತ್ತಿದೆ. ಇಂದು ದೆಹಲಿ ಸರ್ಕಾರ ಹಾಗೂ ಕೇಂದ್ರ ಎರಡರ ನಡುವೆಯೂ ನಾವು ಹೋರಾಟ ನಡೆಸುತ್ತಿದ್ದೇವೆ. ಕೆಲವರಿಗೆ ವಿದ್ಯುತ್ ಕ್ಷೇತ್ರದ ಬಗ್ಗೆ ಅರ್ಥವಾಗುತ್ತಿಲ್ಲ. ಎನ್ ಟಿಪಿಸಿ ಸ್ಥಾವರದ ಮೂಲಕ ವಿದ್ಯುತ್ ನ್ನು ನೀಡುವುದರಲ್ಲಿ ಕೇಂದ್ರ ವಿಫಲವಾಗಿದೆ. ಆಪ್ ಸರ್ಕಾರ ಈ ಬಗೆಗಿನ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತರುತ್ತಿದೆ. ಆದರೆ, ನೀವೇಕೆ ಪ್ರಧಾನಿಯವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.