ನವದೆಹಲಿ: ರಾಮಮಂದಿರ ನಿರ್ಮಾಣಕ್ಕಿಂತ ಅಭಿವೃದ್ಧಿಯೇ ಮುಖ್ಯ ಎಂದಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಬಿಜೆಪಿಯ ಎರಡು ಮುಖವಾಡವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಅಭಿವೃದ್ಧಿಗಾಗಿ ದುಡಿಯಲಿದೆ. ರಾಮಮಂದಿರ ನಿರ್ಮಾಣವನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದರು.
ಬಿಜೆಪಿಯಲ್ಲಿ ಒಬ್ಬೊಬ್ಬ ನಾಯಕರು ಒಂದೊಂದು ರೀತಿ ಮಾತನಾಡುತ್ತಾರೆ. ಸುಬ್ರಮಣಿಯನ್ ಸ್ವಾಮಿ ಡಿಸೆಂಬರ್ ನಿಂದ ರಾಮಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, ರಾಜನಾಥ್ ಸಿಂಗ್ ರಾಮಮಂದಿರ ನಿರ್ಮಾಣ ಪ್ರಮುಖ ವಿಷಯವಲ್ಲ ಎಂದು ಹೇಳುತ್ತಾರೆ. ಇವರಿಬ್ಬರು ಬಿಜೆಪಿಯ ಹಿರಿಯ ನಾಯಕರು. ಇವರ ಹೇಳಿಕೆಯಿಂದಲೇ ಬಿಜೆಪಿಯ ಎರಡು ಮುಖವಾಡಗಳು ಕಾಣಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ದೂರಿದ್ದಾರೆ.
ಉತ್ತರ ಪ್ರದೇಶದ ಚುನಾವಣೆಯ ಹಿನ್ನಲೆಯಲ್ಲಿ ರಾಮಮಂದಿರ ಪ್ರಮುಖ ವಿಷಯವಲ್ಲ ಎಂದು ಹೇಳುತ್ತಾರೆ. ಹಾಗಾದರೆ, ರಾಮಮಂದಿರ ಕುರಿತು ಪುನರಾವರ್ತಿತ ಹೇಳಿಕೆಗಳನ್ನು ಏಕೆ ನೀಡಬೇಕು, ಆ ಕುರಿತು ರಾಜಕೀಯ ಚರ್ಚೆ ಏಕೆ? ಅಷ್ಟಕ್ಕೂ, ಸುಪ್ರೀಂ ಕೋರ್ಟ್ ನಲ್ಲಿ ರಾಮಮಂದಿರ ವಿಚಾರಣೆ ನಡೆಯುತ್ತಿರಬೇಕಾದರೆ, ಬಿಜೆಪಿ ನಾಯಕರು, ವಿಎಚ್ ಪಿ ನಾಯಕರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೋರಾಡಲಿದ್ದು, ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಹೇಳಿದೆ. ರಾಮಮಂದಿರ ವಿಚಾರ ರಾಜಕೀಯ ವಿಷಯವಲ್ಲದಿದ್ದರೂ, ಅದು ಸಂಸ್ಕೃತಿಗೆ ಒಳಪಟ್ಟ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics