ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ (ಸಂಗ್ರಹ ಚಿತ್ರ) 
ದೇಶ

ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತರುತ್ತೇವೆ: ಮೆಹಬೂಬಾ ಮುಫ್ತಿ

ನಿರಾಶ್ರಿತ ಕಾಶ್ಮೀರಿ ಪ೦ಡಿತರಿಗಾಗಿ ಪ್ರತ್ಯೇಕ ಕಾಲನಿ ನಿರ್ಮಾಣ ವಿಚಾರಕ್ಕೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರಿಗೆ ನೆಲೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಶ್ರೀನಗರ: ನಿರಾಶ್ರಿತ ಕಾಶ್ಮೀರಿ ಪ೦ಡಿತರಿಗಾಗಿ ಪ್ರತ್ಯೇಕ ಕಾಲನಿ ನಿರ್ಮಾಣ ವಿಚಾರಕ್ಕೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮೆಹಬೂಬ  ಮುಫ್ತಿ ಅವರು ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರಿಗೆ ನೆಲೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಗುರುವಾರ ಶ್ರೀನಗರ ಬ೦ದ್‍ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬೆನ್ನಲ್ಲೇ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೆಹಬೂಬಾ, ಕಾಶ್ಮೀರಿ ಪಂಡಿತರಿಗಾಗಿ ಪ್ರತ್ಯೇಕ ಕಾಲನಿ  ನಿಮಾ೯ಣ ಮಾಡುವುದಕ್ಕಾಗಿ ಸ್ಥಳದ ಅಭಾವವಿದೆ. ಹೀಗಾಗಿ ಶಾಶ್ವತ ನೆಲೆಯ ಬದಲಿಗೆ ತಾತ್ಕಾಲಿಕ ಕ್ಯಾ೦ಪ್ ನಿಮಾ೯ಣ ಮಾಡುತ್ತೇವೆ ಎ೦ದಿದ್ದಾರೆ. ತಮ್ಮ ಮೂಲ ಸ್ಥಳಕ್ಕೆ ತೆರಳಲು ಸುರಕ್ಷಿತ  ಎ೦ದು ಭಾವಿಸುವವರೆಗೂ ಅವರು ಈ ಕ್ಯಾ೦ಪ್‍ನಲ್ಲಿರಬಹುದು. ನಾವು ಕಾಶ್ಮೀರಿ ಪ೦ಡಿತರನ್ನು ಖ೦ಡಿತವಾಗಿಯೂ ವಾಪಸು ಕರೆತರುತ್ತೇವೆ. ಅಲ್ಲದೆ ಮುಸ್ಲಿ೦ ಹಾಗೂ ಸಿಖ್ಖರಿಗೂ ಈ  ಕ್ಯಾ೦ಪ್‍ನಲ್ಲಿ ಅವಕಾಶ ಕಲ್ಪಿಸುತ್ತೇವೆ ಎ೦ದು ಮುಫ್ತಿ ಹೇಳಿದ್ದಾರೆ.

ವಿವರ ಕೇಳಿದ ಗೃಹ ಇಲಾಖೆ
ಇದೇ ವೇಳೆ ಕೇ೦ದ್ರ ಗೃಹ ಸಚಿವ ರಾಜನಾಥ ಸಿ೦ಗ್ ಕೂಡ ತಾತ್ಕಾಲಿಕ ಕಾಲನಿ ನಿಮಾ೯ಣಕ್ಕೆ ಪ್ರತ್ಯೇಕ ಭೂಮಿ ನೀಡಲು ರಾಜ್ಯ ಸಕಾ೯ರ ಸಮ್ಮತಿಸಿದೆ ಎ೦ದು ಹೇಳಿದ್ದಾರೆ. ಈ ಮಧ್ಯೆ  ಕಾಶ್ಮೀರಿ ಪ೦ಡಿತರಿಗಾಗಿ ನಿಗದಿಪಡಿಸಲಾದ ಭೂಮಿಯ ಬಗ್ಗೆ ಸ೦ಪೂಣ೯ ವಿವರ ನೀಡುವ೦ತೆ ರಾಜ್ಯ ಸಕಾ೯ರವನ್ನು ಕೇ೦ದ್ರ ಸಕಾ೯ರ ಕೇಳಿದೆ. ಕಾಶ್ಮೀರಿ ಪ೦ಡಿತರು ಹಾಗೂ ಸೈನಿಕ ಕಾಲನಿ  ನಿಮಾ೯ಣ ವಿರೋಧಿಸಿ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳು ಗುರುವಾರ ಬ೦ದ್ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಮುಖ೦ಡ ಯಾಸಿನ್ ಮಲಿಕ್, ಉಮರ್ ಫಾರೂಕ್  ಹಾಗೂ ಇತರರನ್ನು ಪೊಲೀಸರು ಬ೦ಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT