ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಳ್ಳತನವಾಗಿದ್ದ ಕಾರು ಸಿಕ್ಕಿದ್ದು OLX ನಲ್ಲಿ!

9 ತಿಂಗಳ ಹಿಂದ ಕಳುವಾಗಿದ್ದ ವ್ಯಕ್ತಿಯೊಬ್ಬನ ಕಾರು, OLX ನಲ್ಲಿ ಹುಡುಕುತ್ತಿರುವಾಗ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ...

ಒಎಲ್ ಎಕ್ಸ್
Shilpa D
Updated On : 29 May 2016, 10:52 am

ನೋಯ್ಡಾ:  9 ತಿಂಗಳ ಹಿಂದ ಕಳುವಾಗಿದ್ದ ವ್ಯಕ್ತಿಯೊಬ್ಬನ ಕಾರು, OLX ನಲ್ಲಿ ಹುಡುಕುತ್ತಿರುವಾಗ ಪತ್ತೆಯಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ಕಾರುಕೊಳ್ಳಲು OLX ನಲ್ಲಿ ಹುಡುಕುತ್ತಿರುವಾಗ ಕಳುವಾಗಿದ್ದ ತನ್ನದೇ  ಹೋಂಡಾ ಸಿಟಿ ಕಾರು ಪತ್ತೆಯಾಗಿದೆ. ನಂತರ ಜಾಹೀರಾತುದಾರರನ್ನು ಭೇಟಿಯಾಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಖದೀಮರನ್ನು ಬಂಧಿಸಲಾಗಿದೆ.

ರಿಯಲ್ ಎಸ್ಟೇಟ್ ದಲ್ಲಾಳಿಯಾದ ಕುಲವಂತ್ ಸಿಂಗ್ ಎಂಬರುವರು ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳೆದ ಆಗಸ್ಟ್ ನಲ್ಲಿ ಕಳುವಾಗಿತ್ತು. ಈ ಬಗ್ಗೆ ಸಿಂಗ್ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ ಕಾರು ಎಲ್ಲೂ ಪತ್ತೆಯಾಗದ ಕಾರಣ, ಬಳಕೆ ಮಾಡಿದ ಕಾರು ಖರೀದಿ ಮಾಡಲು ಮುಂದಾದರು.

ನಂತರ OLX ನಲ್ಲಿ ಕಾರು ಹುಡುಕುತ್ತಿದ್ದಾಗ ಕಳುವಾಗಿದ್ದ ತಮ್ಮದೇ ಕಾರು ವೆಬ್ ಸೈಟ್ ನಲ್ಲಿ ಕಣ್ಣಿಗೆ ಬಿದ್ದಿದೆಯ ಅದರಲ್ಲಿ ಜಾಹೀರಾತುದಾರನ  ಫೋನ್ ನಂಬರ್ ಕೂಡ ಇತ್ತು. ಆ ವ್ಯಕ್ತಿಯನ್ನು ಸಂಪರ್ಕಿಸಿದ ಸಿಂಗ್ ವ್ಯವಹಾರ ಕುದಿಸಿದರು.ಕಾರು ಕೊಳ್ಳಲು ಸಿಂಗ್ ಆಗಮಿಸಿದ ವೇಳೆಯಲ್ಲಿ ಮುಫ್ತಿಯಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.  ಲೋನಿ ಅಹ್ಮದ್ ಎಂಬಾತ ತಾನು ಆ ಕಾರನ್ನು ಬೇರೆಯವರಿಂದ ಖರೀದಿಸಿರುವುದಾಗಿ ತಿಳಿಸಿದ. ಮುಖ್ಯ ಆರೋಪಿ ಝುಲ್ಫೀಕರ್  ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments