ಮುಂಬೈ: ಸದಾ ಒಂದಲ್ಲ ಒಂದು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸುತ್ತಿದ್ದ ಮಿತ್ರ ಪಕ್ಷ ಶಿವಸೇನೆಗೆ ಇನ್ನುಮುಂದೆ ಪ್ರಧಾನಿ ವಿರುದ್ಧ ದಾಳಿ ನಡೆಸದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗುರುವಾರ ಕೇಳಿಕೊಂಡಿದ್ದಾರೆ.
ಅದಾಗ್ಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮುಂದುವರೆಯಲಿದ್ದು, ತಮ್ಮ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ ಎಂದು ಮಹಾ ಸಿಎಂ ಭರವಸೆ ನೀಡಿದ್ದಾರೆ.
'ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದರಿಂದ ಶಿವಸೇನೆಗೇ ಕೆಟ್ಟ ಹೆಸರು ಬರುತ್ತದೆ ಮತ್ತು ಜನ ಇದನ್ನು ಇಷ್ಟ ಪಡುವುದಿಲ್ಲ. ಅಂತಹ ಟೀಕೆಗಳಿಗೆ ಉತ್ತರಿಸಲು ಮತ್ತು ಎದುರಿಸಲು ನಾನು ಸಿದ್ಧನಿದ್ದೇನೆ. ಆ ಬಗ್ಗೆ ನಾನು ಕೇರ್ ಮಾಡಲ್ಲ. ಸರ್ಕಾರ ಮತ್ತು ರಾಜಕೀಯ ಎರಡೂ ಬೇರೆ ಬೇರೆ ವಿಚಾರ' ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಫಡ್ನವಿಸ್ ಅವರು, ಶಿವಸೇನೆ ಪ್ರಧಾನಿ ಅವರನ್ನು ಟೀಕಿಸುವುದನ್ನು ನಿಲ್ಲಿಸಲಿ. ಅವರು ನನ್ನನ್ನು ಟೀಕಿಸಲಿ. ಅದಕ್ಕೆ ನಾನು ಉತ್ತರಿಸುತ್ತೇನೆ ಎಂದಿದ್ದಾರೆ.
ಹಲವು ಭಿನ್ನಾಭಿಪ್ರಾಯಗಳ ಮಧ್ಯಯೇ ಫಡ್ನವಿಸ್ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರ ಮೂರು ವರ್ಷ ಪೂರೈಸಿದ್ದು, ಇತ್ತೀಚಿಗೆ ಮರಾಠ ಸಮುದಾಯದ ಮೀಸಲಾತಿ, ವಿದರ್ಭ ವಿವಾದ ಹಾಗೂ ಕರಣ್ ಜೋಹರ್ ಅವರ 'ಎ ದಿಲ್ ಹೈ ಮುಷ್ಕಿಲ್' ವಿವಾದ ಸೇರಿದಂತೆ ಹಲವು ವಿವಾದಗಳಲ್ಲಿ ಎರಡೂ ಪಕ್ಷಗಳು ಭಿನ್ನವಾದ ನಿಲುವು ತೆಗೆದುಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics