ಎನ್ ಡಿಟಿವಿಗೆ 24 ಗಂಟೆಗಳ ನಿಷೇಧವನ್ನು ಖಂಡಿಸಿದ ಆಮ್ ಆದ್ಮಿ ಪಕ್ಷ
ಎನ್ ಡಿಟಿವಿಗೆ 24 ಗಂಟೆಗಳ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ನವದೆಹಲಿ: ಎನ್ ಡಿಟಿವಿಗೆ 24 ಗಂಟೆಗಳ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ. ಮಾಧ್ಯಮಗಳು ಒಂದು ದಿನ ಸಂಪೂರ್ಣ ಪ್ರಸಾರ ನಿಲ್ಲಿಸುವ ಮೂಲಕ ಎನ್ ಡಿಟಿವಿ ಮೇಲೆ ಹೇರಲಾಗಿರುವ ನಿಷೇಧವನ್ನು ವಿರೋಧಿಸಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದ್ದಾರೆ. ಎನ್ ಡಿಟಿವಿಗೆ ಬೆಂಬಲ ನೀಡಿ ಎಲ್ಲಾ ಮಾಧ್ಯಮಗಳು ಒಂದು ದಿನ ಪ್ರಸಾರ ನಿಲ್ಲಿಸಲಿವೆ ಎಂಬ ವಿಶ್ವಾಸವಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ಎನ್ ಡಿಟಿವಿ ಇಂಡಿಯೋಯಾ ಮೇಲೆ ಒಂದು ದಿನದ ಕಾಲ ನಿಷೇಧ ಹೇರಿರುವ ಮೂಲಕ ಪ್ರಜಾಪ್ರಭುತ್ವದ 4 ನೇ ಅಂಗವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದು, ತುರ್ತು ಪರಿಸ್ಥಿತಿಯನ್ನು ಹೇರುವುದಕ್ಕೆ ಮೊದಲ ಹಂತದ ಪ್ರಯತ್ನ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಎನ್ ಡಿಟಿವಿ ಮೇಲೆ ನಿಷೇಧ ಹೇರುವ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷ ಇಂದಿರಾ ಗಾಂಧಿ ಅವರ ಸರ್ಕಾರವನ್ನು ಉದಾಹರಣೆ ನೀಡಿದ್ದು, ತುರ್ತು ಪರಿಸ್ಥಿತಿ ನಂತರ ಅಂದರೆ 1977 ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಿಕ್ಕ ಜನಾದೇಶವನ್ನು ನೆನಪಿಸಿಕೊಳ್ಳುವಂತೆ ಹೇಳಿದೆ.
ಎನ್ ಡಿಟಿವಿ ಮೇಲೆ ಒಂದು ದಿನದ ನಿಷೇಧ ವಿಧಿಸಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನರೇಂದ್ರ ಮೋದಿ ದೇಶವನ್ನು ಮತ್ತೊಂದು ತುರ್ತು ಪರಿಸ್ಥಿತಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.