ಸೂರತ್: ಮಹಾತ್ಮ ಗಾಂಧಿ ಮೊಮ್ಮಗ ಹಾಗೂ ನಾಸಾ ನಿವೃತ್ತ ವಿಜ್ಞಾನಿ ಕನು ಗಾಂಧಿ ನಿನ್ನೆ ಸೂರತ್ ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
87 ವರ್ಷದ ಕನು ಗಾಂಧಿ ಪತ್ನಿ ಶಿವಲಕ್ಷ್ಮಿಯನ್ನು ಅಗಲಿದ್ದಾರೆ. 1930ರಲ್ಲಿ ಮಹಾತ್ಮ ಗಾಂಧಿ ದಂಡಿಯಲ್ಲಿ ನಡೆಸಿದ ಉಪ್ಪಿನ ಸತ್ಯಾಗ್ರಹದಲ್ಲಿ ತಮ್ಮ ತಾತ ಗಾಂಧೀಜಿ ಹಿಡಿದುಕೊಳ್ಳುತ್ತಿದ್ದ ಕೋಲನ್ನು ತಾನು ಹಿಡಿದು ಓಡಾಡಿದ್ದ ಬಾಲಕ ಕನು ಗಾಂಧಿ.
ಅಕ್ಟೋಬರ್ 22 ರಂದು ಕನುಗಾಂಧಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.