ದೇಶ

ಮಹಿಳಾ ಪೇದೆಗಳ ಮೇಲೆ ಅತ್ಯಾಚಾರ: ಮೂವರ ವಿರುದ್ಧ ಕೇಸ್

Shilpa D

ಮಥುರಾ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳಾ ಪೇದೆಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಅಧಿಕಾರಿ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.

ಮೊದಲ ಘಟನೆಯಲ್ಲಿ ಗ್ವಾಲಿಯರ್ ನ ಮಹಿಳಾ ಪೇದೆಯನ್ನು ನರೇಂದ್ರ ಮತ್ತು ಬಬ್ಬಲ್ ಎಂಬುವರು ನಗರದಲ್ಲಿರುವ ಸ್ಥಳೀಯ ಉಪಹಾರ ಗೃಹಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

ಉಪಹಾರ ಗೃಹದಲ್ಲಿ ತನ್ನ ಮೇಲೆ ನರೇಂದ್ರ ಅತ್ಯಾಚಾರ ನಡೆಸಿದ, ಈ ವೇಳೆ ಬಬ್ಬಲ್ ಯಾರದರು ಬರಬಹುದು ಎಂದು ಹೊರಗಡೆ ನಿಂತು ಕಾಯುತ್ತಿದ್ದ ಎಂದು ಆರೋಪಿಸಲಾಗಿದೆ.

ಮತ್ತೊಂದು ಘಟನೆಯಲ್ಲಿ ಮಹಿಳಾ ಅಧಿಕಾರಿಯನ್ನು ಮಥುರಾ ರೈಲ್ವೆ ಜಂಕ್ಷನ್ ಗೆ ಕರೆದ ಪೊಲೀಸ್ ಪೇದೆ ಸತ್ಯೇಂದ್ರ ಸಿಂಗ್ ಆಕೆಗೆ ಕುಡಿಯಲು ಮತ್ತು ಬರುವ ಪಾನೀಯ ನೀಡಿ ಅನಂತರ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.
ಈ ಮೊದಲು ಸತ್ಯೇಂದ್ರ ಸಿಂಗ್ ವಿವಾಹವಾಗುವಂತೆ ನನ್ನ ಬಳಿ ಪ್ರಸ್ತಾಪವಿಟ್ಟಿದ್ದ. ಆದರೆ ನಾನು ನಿರಾಕರಿಸಿದ್ದೆ ಎಂದು ಸಂತ್ರಸ್ತೆ ದೂರಿದ್ದಾರೆ. ಇಬ್ಬರು ಮಹಿಳಾ ಪೇದೆಗಳನ್ನು ಗ್ವಾಲಿಯರ್ ಗೆ ಪೊಸ್ಟಿಂಗ್ ಮಾಡಲಾಗಿತ್ತು.

ಎರಡು ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿಗೆ ಎಂದು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

SCROLL FOR NEXT