ಸುಪ್ರೀಂ ಕೋರ್ಟ್(ಸಂಗ್ರಹ ಚಿತ್ರ)
ನವದೆಹಲಿ: ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ನ್ಯಾಯಾಧೀಶರ ನೇಮಕಕ್ಕೆ ಮಂಡಳಿ ಶಿಫಾರಸು ಮಾಡಿದ 77 ಹೆಸರುಗಳಲ್ಲಿ 34 ಹೆಸರುಗಳನ್ನು ಅಂತಿಮಗೊಳಿಸಿ ಅನುಮೋದನೆ ನೀಡಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಕಳುಹಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ನೇತೃತ್ವದ ನ್ಯಾಯಪೀಠಕ್ಕೆ ವಿವರ ಸಲ್ಲಿಸಿರುವ ಕೇಂದ್ರ ಸರ್ಕಾರ, ಪ್ರಸ್ತುತ ನ್ಯಾಯಾಧೀಶರ ನೇಮಕಕ್ಕೆ ಹೆಸರು ಸೂಚಿಸಿ ಶಿಫಾರಸ್ಸು ಮಾಡಿರುವ ಯಾವುದೇ ಅರ್ಜಿಗಳು ಉಳಿದುಕೊಂಡಿಲ್ಲ ಎಂದು ಹೇಳಿದೆ.
ಒಟ್ಟು 77 ನ್ಯಾಯಾಧೀಶರ ಹೆಸರುಗಳ ಪೈಕಿ 34 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಇನ್ನುಳಿದ 43 ಶಿಫಾರಸ್ಸುಗಳನ್ನು ಸುಪ್ರೀಂ ಕೋರ್ಟ್ ನ ಮಂಡಳಿಗೆ ಮತ್ತೊಮ್ಮೆ ಪರಿಶೀಲಿಸುವಂತೆ ಕಳುಹಿಸಲಾಗಿದೆ ಎಂದು ಕೇಂದ್ರ ಪರ ವಕೀಲ ಅಟೊರ್ನಿ ಜನರಲ್ ಮುಕುಲ್ ರೊಹಟಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಆಗಸ್ಟ್ 3ರಂದು ಹೊಸ ಪ್ರಕ್ರಿಯಾ ಕರಡು ಸುತ್ತೋಲೆಯನ್ನು ಮರುಪರಿಶೀಲಿಸುವಂತೆ ಕಳುಹಿಸಿದ್ದು, ಅದಕ್ಕೆ ಪ್ರತಿಕ್ರಿಯೆ ಇದುವರೆಗೆ ಬಂದಿಲ್ಲ ಎಂದು ಅಟೊರ್ನಿ ಜನರಲ್ ರೊಹಟಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಹಿರಿಯ ನ್ಯಾಯಾಧೀಶರುಗಳು ಮಂಡಳಿಯಲ್ಲಿದ್ದು ಇದೇ 15ರಂದು ಸಭೆ ಸೇರಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics