ದೇಶ

ಅಮೆರಿಕ ಚುನಾವಣೆ: 20 ವರ್ಷಗಳಲ್ಲಿ ಇದೇ ಮೊದಲ ಬಾರಿ ಮತದಾನ ಪ್ರಮಾಣ ಅತ್ಯಂತ ಕಡಿಮೆ

Srinivas Rao BV
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗಿದ್ದಾರೆ. ಆದರೆ 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಳೆದ 20 ವರ್ಷಗಳಲ್ಲೆ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ ಮತದಾನ ನಡೆದಿದೆ. 
ಅಮೆರಿಕಾದ ಚುನಾವಣಾ ಅಧಿಕಾರಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾದ ಮತ ಪ್ರಮಾಣದ ಬಗ್ಗೆ ಮಾಇತಿ ನೀಡಿದ್ದು, ಶೇ.55 ರಷ್ಟು ಜನರು ಮತಚಲಾಯಿಸಿದ್ದಾರೆ ಎಂದು ಸಿಎನ್ಎನ್ ವರದಿ ಪ್ರಕಟಿಸಿದೆ. 1996 ರಲ್ಲಿ ಶೇ.53.5 ರಷ್ಟು ಮತಚಲಾವಣೆಯಾಗಿದ್ದನ್ನು ಬಿಟ್ಟರೆ 20 ವರ್ಷಗಳಲ್ಲಿ ಕಡಿಮೆ ಪ್ರಮಾಣದ ಮತಚಲಾವಣೆಯಾಗಿರುವುದು ಇದೇ ಮೊದಲ ಬಾರಿಯಾಗಿದೆ. 
ಇನ್ನು ಮತದಾರರ ಅರ್ಹತೆಗಳ ಬಗ್ಗೆ ಅನುಮಾನಗಳಿರುವ ಮತಗಳು( ಪ್ರಾವಿಷನಲ್ ಬ್ಯಾಲೆಟ್) ಗಳ ಎಣಿಕೆ ನಡೆಯುತ್ತಿದ್ದು, ಶೇಕಡಾವಾರು ಮತದಾನದ ಪ್ರಮಾಣ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೂ ಸಹ 2008 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.64 ರಷ್ಟು ಮತದಾನ ನಡೆದಿತ್ತು, ಈ ಪ್ರಮಾಣವನ್ನು ತಲುಪಲು ಇನ್ನೂ 18.7 ಮಿಲಿಯನ್ ಮತಗಳು ಚಲಾವಣೆಯಾಗಬೇಕಾಗುತ್ತದೆ. ಒಟ್ಟಾರೆ 1996 ರ ಅಧ್ಯಕ್ಷೀಯ ಚುನಾವಣೆಯ ನಂತರ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ.
SCROLL FOR NEXT