ರೈಲ್ವೆ ಇಲಾಖೆ ನವದೆಹಲಿಯಲ್ಲಿ ಆಯೋಜಿಸಿದ್ದ ರೈಲ್ ವಿಕಾಸ್ ಶಿವಿರ್ ನ್ನು ಉದ್ಘಾಟಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆಗೆ ಗತಿ ಪ್ರಗತಿ ಎರಡೂ ಅಗತ್ಯವಿದೆ ಎಂದು ಹೇಳಿದ್ದಾರೆ.
" ನಾವು ತಂತ್ರಜ್ಞಾನ ಚಾಲಿತ ಶತಮಾನದಲ್ಲಿದ್ದೇವೆ, ಶತಮಾನ ಬದಲಾಗಿದೆ ಆದ್ದರಿಂದ ರೈಲ್ವೆಯೂ ಬದಲಾಗಬೇಕಿದೆ, ರೈಲ್ವೆ ಇಲಾಖೆಯನ್ನು ಆರ್ಥಿಕವಾಗಿ ಬಲಪಡಿಸಲು ನಾವು ಒಗ್ಗೂಡಿ ಕೆಲಸ ಮಾಡಬೇಕಿದ್ದು ಗತಿ ಪ್ರಗತಿ ಎರಡೂ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ರೈಲ್ವೆ ಬಜೆಟ್ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ರೈಲ್ವೆ ಬಜೆಟ್ ನ ಗಮನ ಎಂದಿಗೂ ರಾಜಕೀಯ ಪ್ರೇರಿತವಾಗಿರಲಿಲ್ಲ ಎಂದು ಸ್ಪಷಟನೆ ನೀಡಿದ್ದು, ರೈಲ್ವೆ ಇಲಾಖೆಯ ಪರಿವರ್ತನೆಗೆ ಹೊಸ ಗತಿ, ಪ್ರಗತಿ ಹಾಗೂ ಹೊಸ ಸಾಮರ್ಥ್ಯ ಅಗತ್ಯವಿದೆ ಎಂದಿದ್ದಾರೆ.
ಇದೇ ವೇಳೆ ರೈಲ್ವೆ ಇಲಾಖೆಯೊಂದಿಗೆ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಚಹಾ ಮಾರಾಟ ಮಾಡಿದ್ದ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದು, ರೈಲ್ವೆ ಇಲಾಖೆಯನ್ನು ಅಭಿವೃದ್ಧಿ ಪಡಿಸಲು ಇದೂ ತಮ್ಮ ಬಾಲ್ಯದ ಅನುಭವ, ನೆನಪುಗಳೂ ಕಾರಣ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics