ಕಮಿಷನ್ ಆಧಾರದ ಮೇಲೆ ಹಣ ವಿನಿಮಯ ಮಾಡುತ್ತಿದ್ದ ಗ್ಯಾಂಗ್ ಆರೆಸ್ಟ್
ಕಮಿಷನ್ ಆಧಾರದ ಮೇಲೆ ಹಳೆ ಮತ್ತು ಹೊಸ ನೋಟುಗಳ ವಿನಿಮಯ ಮಾಡಿಕೊಡುತ್ತಿದ್ದ 17 ಮಂದಿಯ ತಂಡವೊಂದನ್ನು ಆಂಧ್ರ ಪ್ರದೇಶ ಪೊಲೀಸರು ...
ವಿಜಯವಾಡ: ಕಮಿಷನ್ ಆಧಾರದ ಮೇಲೆ ಹಳೆ ಮತ್ತು ಹೊಸ ನೋಟುಗಳ ವಿನಿಮಯ ಮಾಡಿಕೊಡುತ್ತಿದ್ದ 17 ಮಂದಿಯ ತಂಡವೊಂದನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಸೇರಿದಂತೆ 17 ಮಂದಿಯನ್ನು ಬಂಧಿಸಿರುವ ಪೊಲೀಸರು 6 ಲಕ್ಷ0 80 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಗುಂಟೂರು, ವಿಜಯವಾಡ, ಪಶ್ಚಿಮ ಗೋದಾವರಿ, ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ವ್ಯಾಪಾರಿಗಳಿಗೆ ಶೇ.18 ರಿಂದ 20 ರಷ್ಟು ಕಮಿಷನ್ ಆಧಾರದ ಮೇಲೆ ಹಣ ವಿನಿಮಯ ಮಾಡುತ್ತಿದ್ದರೂ ಎಂದು ವಿಜಯವಾಡ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ತಂಡಕ್ಕೆ 7 ವ್ಯಾಪಾರಿಗಳು ಹಣ ವಿನಿಮಯ ಮಾಡಿಕೊಡುವಂತೆ ಸುಮಾರು 6 ಲಕ್ಷದ 80 ಸಾವಿರ ರು ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.