ನರೇಂದ್ರ ಮೋದಿ (ಸಂಗ್ರಹ ಚಿತ್ರ) 
ದೇಶ

ನೋಟು ನಿಷೇಧದ ಪ್ರಧಾನಿ ನಿರ್ಧಾರಕ್ಕೆ ಶೇ.80-86 ರಷ್ಟು ಜನರ ಬೆಂಬಲ: ಸಮೀಕ್ಷೆ

ಪ್ರಧಾನಿ ನಿರ್ಧಾರವನ್ನು ರಾಷ್ಟ್ರದ ಶೇ.80-86 ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ರೂ.500 1000 ರೂ ನೋಟು ನಿಷೇಧದ ನಿರ್ಧಾರದಿಂದ ರಾಷ್ಟ್ರದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೆ, ಪ್ರಧಾನಿ ನಿರ್ಧಾರವನ್ನು ರಾಷ್ಟ್ರದ ಶೇ.80-86 ರಷ್ಟು ಜನರು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. 
ನೋಟು ನಿಷೇಧದ ಬಗ್ಗೆ ಸಿ-ಓಟರ್ ದೇಶಾದ್ಯಂತ ನಡೆಸಿರುವ ಸಮೀಕ್ಷೆಯಲ್ಲಿ ಬಹುತೇಕ ಜನರು ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನೋಟು ನಿಷೇಧದ ನಿರ್ಧಾರದಿಂದ ಸಹಜವಾಗಿ ಸಮಸ್ಯೆ ಉಂಟಾಗಿದೆ. ಆದರೆ ಕಪ್ಪು ಹಣ ನಿಯಂತ್ರಣಕ್ಕೆ ಇದು ಸೂಕ್ತ ನಿರ್ಧಾರ ಎಂದು ಶೇ.80-86 ಮಂದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 
ದೇಶದ ಒಟ್ಟು ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಸಿ-ಓಟರ್ ಸಮೀಕ್ಷೆ ನಡೆಸಲಾಗಿದ್ದು, ವಸತಿ ಪ್ರದೇಶ, ಆದಾಯ ಮಟ್ಟ ಹಾಗೂ ವಯೋಮಾನದ ವಿಭಾಗದಲ್ಲಿ ಸಮೀಕ್ಷೆಯನ್ನು ಪ್ರತ್ಯೇಕಿಸಿದರೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಜನರ ಸಂಖ್ಯೆ ಮತ್ತಷ್ಟು ಸ್ಥಿರವಾಗಿದೆ, ಒಟ್ಟಾರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಶೇ.86 ರಷ್ಟು ಜನರು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಸಿ-ಓಟರ್ ಸಮೀಕ್ಷೆಯ ಮೂಲಕ ತಿಳಿದುಬಂದಿದೆ. 
ಅರೆ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಜನರು ಅಂದರೆ ಶೇ.80.6 ರಷ್ಟು ಜನರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಈ ಪೈಕಿ ಬಹುತೇಕ ಜನರು ಅತಿ ಹೆಚ್ಚು ಆದಾಯ ಹೊಂದಿದ ವರ್ಗಕ್ಕೆ ಸೇರಿದ್ದಾರೆ ಹಾಗೂ 25-60  ಸಾವಿರ ರೂ ಆದಾಯವಿರುವ ಶೇ.83.3 ರಷ್ಟು ಜನರು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಸಿ-ಓಟರ್ ಸಮೀಕ್ಷೆ ವರದಿ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು