ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಇತ್ತೀಚೆಗಷ್ಟೇ ನೋಟು ನಿಷೇಧ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ಅವರದ್ದೇ ಪಕ್ಷದ ಹಿರಿಯ ಮುಖಂಡರೊಬ್ಬರು ಬಿಎಸ್ಪಿ ಪಕ್ಷದ ರ್ಯಾಲಿ ವೇಳೆ ಪ್ರಧಾನಿ ಮೋದಿರನ್ನು ಹಾಡಿ ಹೋಗಳಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬಿಎಸ್ಪಿ ಕಾರ್ಯಕರ್ತರ ರ್ಯಾಲಿ ವೇಳೆ ಮಾತನಾಡಿದ ಬಿಎಸ್ಪಿ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಆಗ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು. ಇದೀಗ 500-1000 ರುಪಾಯಿ ನೋಟುಗಳ ನಿಷೇಧದ ಮೂಲಕ ದೇಶದಲ್ಲಿ ಭ್ರಷ್ಟರ ವಿರುದ್ಧ ಎರಡನೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಕೊಂಡಾಡಿದರು.
ಮೋದಿ ಅವರನ್ನು ಹೊಗಳುತ್ತಿದ್ದ ವೇಳೆ ಕಾರ್ಯಕರ್ತನೊಬ್ಬ ಮುಖಂಡರ ಬಳಿಯಿಂದ ಮೈಕ್ ಕಸಿದುಕೊಳ್ಳಲು ಪದೇ ಪದೇ ಯತ್ನಿಸಿದರು ಮೈಕ್ ಬಿಡದ ಮುಖಂಡರು ಮೋದಿ ಅವರನ್ನು ಶ್ಲಾಘಿಸಿದರು. ಕೊನೆಗೆ ಕಾರ್ಯಕರ್ತ ಮುಖಂಡರಿಂದ ಮೈಕ್ ಕಿತ್ತುಕೊಂಡು ಮುಖಂಡರ ಭಾಷಣೆಗೆ ಅಂತ್ಯ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics