ನೋಟು ಹಿಂಪಡೆತ ನಡೆಗೆ ನರೇಂದ್ರ ಮೋದಿ ಆಪ್ ನಲ್ಲಿ ಶೇ.93 ರಷ್ಟು ಜನರ ಬೆಂಬಲ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮನವಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು 500 ಮತ್ತು 1000 ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯನ್ನು ಎನ್ ಎಂ (ನರೇಂದ್ರ ಮೋದಿ) ಮೊಬೈಲ್ ಆಪ್ ನಲ್ಲಿ ರೇಟ್ ಮಾಡಿದ್ದಾರೆ.
ಶೇ.90 ರಷ್ಟು ಜನರು ನೋಟು ನಿಷೇಧ ಮಾಡಿರುವ ಪ್ರಧಾನಿ ಮೋದಿ ಅವರ ಕ್ರಮವನ್ನು ಬೆಂಬಲಿಸಿದ್ದು, ಕಪ್ಪುಹಣ ನಿರ್ನಾಮಕ್ಕೆ 500, 1000 ರೂ ಮುಖಬೆಲೆಯ ನೋಟು ನಿಷೇಧ ಸೂಕ್ತ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಕೇವಲ 24 ಗಂಟೆಗಳಲ್ಲಿ ಸಾರ್ವಜನಿಕರು ಮೊಬೈಲ್ ಆಪ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದು ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
24 ಗಂಟೆಗಳಲ್ಲಿ 5 ಲಕ್ಷ ಜನರು ಅಭಿಪ್ರಾಯ ತಿಳಿಸಿದ್ದು, ಶೇ.73 ರಷ್ಟು ಜನರು 5 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಶೇ.57 ರಷ್ಟು ಜನರು ಸರ್ಕಾರದ ಕ್ರಮವನ್ನು ಅತ್ಯುತ್ತಮ ಎಂದು ರೇಟ್ ಮಾಡಿದ್ದು, ಒಟ್ಟಾರೆ ಕೇಂದ್ರ ಸರ್ಕಾರವನ್ನು ಅತ್ಯುತ್ತಮ ಎಂದು ಶೇ.92 ರಷ್ಟು ಜನರು ರೇಟ್ ಮಾಡಿದ್ದಾರೆ. 5 ಲಕ್ಷ ಜನರ ಪೈಕಿ ಕೇವಲ ಶೇ. 2ರಷ್ಟು ಜನರು ಮಾತ್ರ ಸರ್ಕಾರದ ಕ್ರಮವನ್ನು ಅತ್ಯಂತ ಕಳಪೆ ಎಂದು ರೇಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸಿ-ಓಟರ್ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ದೇಶದ ಶೇ.86 ರಷ್ಟು ಜನರು ನೋಟು ನಿಷೇಧ ಕ್ರಮವನ್ನು ಬೆಂಬಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics