ಸಂಗ್ರಹ ಚಿತ್ರ 
ದೇಶ

ಪಾಕ್ ವಿರುದ್ಧ ಪ್ರತೀಕಾರ: ಮೂವರು ಪಾಕ್ ಸೈನಿಕರ ಹತ್ಯೆ

ಮೂವರು ಯೋಧರನ್ನು ಹತ್ಯೆ ಮಾಡಿ, ಓರ್ವ ಯೋಧನ ಶಿರಚ್ಛೇದ ಮಾಡಿ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಮೂವರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ...

ನವದೆಹಲಿ: ಮೂವರು ಯೋಧರನ್ನು ಹತ್ಯೆ ಮಾಡಿ, ಓರ್ವ ಯೋಧನ ಶಿರಚ್ಛೇದ ಮಾಡಿ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಮೂವರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ.

ಯೋಧನ ಶಿರಚ್ಛೇದ ಮಾಡುವ ಮೂಲಕ ವಿಕೃತಿ ಮೆರಿದಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮಂಗಳವಾರ ತಡರಾತ್ರಿಯಿಂದಲೇ ಜಮ್ಮು ಮತ್ತು ಕಾಶ್ಮೀರದ ಮುಚ್ಚಲ್ ಪ್ರಾಂತ್ಯದಲ್ಲಿ ಭಾರೀ ಗುಂಡಿನ ದಾಳಿ ನಡೆಸಿತ್ತು. ಪಾಕಿಸ್ತಾನದ ಗಡಿ ಪ್ರದೇಶದ ಸೇನಾ ನೆಲೆಗಳು, ಠಾಣೆಗಳು ಮತ್ತು ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ನಡೆದಿ ಶೆಲ್ ದಾಳಿಗೆ ಮೂವರು ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆಂದು ಡಾನ್ ವರದಿ ಮಾಡಿದೆ.

ಈ ಬಗ್ಗೆ ಸ್ವತಃ ಪಾಕಿಸ್ತಾನ ಆಂತರಿಕ ಸೇವಾ ಸಾರ್ವಜನಿಕ ಸಂಪರ್ಕ ಇಲಾಖೆ (ಐಎಸ್'ಪಿಆರ್) ಹೇಳಿಕೊಂಡಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ಶೆಲ್ ದಾಳಿಗೆ ಪಾಕಿಸ್ತಾನದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆಂದು ತಿಳಿಸಿದೆ.

ಕಾಶ್ಮೀರ ವಿಚಾರ ಕುರಿತಂತೆ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಾರತ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.

ಸೈನಿಕರ ಹತ್ಯೆ ಕುರಿತಂತೆ ಡಾನ್ ವರದಿ ಮಾಡಿದ್ದು, ಭಾರತೀಯ ಸೇನೆ ಮೂವರು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದ್ದು, ಸಾವನ್ನಪ್ಪಿದ್ದ ಸೈನಿಕರನ್ನು ಕ್ಯಾಪ್ಟನ್ ತೈಮೂರ್ ಅಲಿ ಖಾನ್, ಹವಲ್ದರ್ ಮುಶ್ತಕ್ ಹುಸೇನ್ ಮತ್ತು ಲ್ಯಾನ್ಸ್ ನಾಯ್ಕ್ ಗುಲಾಮ್ ಹುಸೇನ್ ಎಂದು ಗುರ್ತಿಸಲಾಗಿದೆ. ಅಲ್ಲದೆ, ಸಾವನ್ನಪ್ಪಿರುವ ಮೂವರು ಪಾಕಿಸ್ತಾನ ಸೈನಿಕರ ಭಾವಚಿತ್ರಗಳನ್ನು ಐಎಸ್'ಪಿಆರ್ ಬಿಡುಗಡೆ ಮಾಡಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT