ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬ್ಯಾಂಕ್ ಕ್ಯೂನಲ್ಲಿ ಕಾಣಿಸಿಕೊಂಡ ಮಾಜಿ ಪ್ರೇಮಿ...ಮುಂದೆ ನಡೆದಿದ್ದು ರಾದ್ದಾಂತ?

ಹಳೇ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಗಳ ಮುಂದೆ ಉದ್ದುದ್ದ ಕ್ಯೂ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕ್ಯೂನಲ್ಲಿ ಕೈ ಕೊಟ್ಟು ಹೋಗಿದ್ದ...

ಮಾಜಿ ಪ್ರಿಯಕರನಿಗೆ ಥಳಿತ
Vishwanath S
Updated On : 24 Nov 2016, 8:40 am
ಮುಂಬೈ: ಹಳೇ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಗಳ ಮುಂದೆ ಉದ್ದುದ್ದ ಕ್ಯೂ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕ್ಯೂನಲ್ಲಿ ಕೈ ಕೊಟ್ಟು ಹೋಗಿದ್ದ ಮಾಜಿ ಪ್ರೇಮಿ ಸಿಕ್ಕಾಗ ಯುವತಿಗೆ ಏನಾಗಿರಬೇಕು? ಮುಂದೆ ನಡೆದಿದ್ದು ದೊಡ್ಡ ರಾದ್ದಾಂತ. 
ನಾಸಿಕ್ ನ ತ್ರಿಂಬಕ್ ರೋಡ್ ನಲ್ಲಿರುವ ಬ್ಯಾಂಕ್ ನ ಕ್ಯೂನಲ್ಲಿ ಕಳೆದ ಸೋಮವಾರ 35 ವರ್ಷದ ಹಳೇ ಪ್ರೇಮಿ ನಿಂತಿದ್ದು ಅದೇ ಕ್ಯೂನಲ್ಲಿ 23 ವರ್ಷದ ಮಹಿಳೆಯೊಬ್ಬಳು ನಿಂತಿರುತ್ತಾಳೆ. ಕೌಂಟರ್ ನಲ್ಲಿ ಹಣ ಪಡೆದು ವಾಪಸ್ಸಾಗುತ್ತಿದ್ದಾಗ ಪರಿಚಯದ ಮುಖವನ್ನು ಕಂಡು ಹೌಹಾರಿದ್ದಾಳೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾಳೆ. 
ಮಾಜಿ ಗೆಳೆಯನನ್ನು ಕಂಡ ಕೂಡಲೇ ಮಹಿಳೆ ತನ್ನ ಸಹೋದರ ಮತ್ತು ತಂದೆಗೆ ಫೋನ್ ಮಾಡಿ ಕರೆಸಿದ್ದಾಳೆ. ಸ್ಥಳಕ್ಕೆ ಬಂದ ಮಹಿಳೆ ಕಡೆಯವರು ಮಾಜಿ ಬಾಯ್ ಫ್ರೆಂಡ್ ಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Advertisement

ಮಹಿಳೆಯ ದೂರಿನನ್ವಯ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 323, 504 ಮತ್ತು 506ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments